ಮುಂಬೈ: ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಆಟಗಾರ ಜಾಸ್ ಬಟ್ಲರ್ (103) ಸ್ಪೋಟಕ ಶತಕ, ಸಂಜೂ ಸ್ಯಾಮ್ಸನ್(38) ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ರೋಚಕ 7 ರನ್‌ಗಳ ಜಯ ಸಾಧಿಸಿತು.
ಬ್ರಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ 103, ಸಂಜೂ ಸ್ಯಾಮನ್ಸ್ 38 ಹಾಗೂ ಹೆಟ್ಮಾಯೆರ್ ಅಜೇಯ 26 ಬ್ಯಾಟಿಂಗ್ ಪ್ರದರ್ಶಿಸಿದರು. ಇದರಿಂದಾಗಿ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 217 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದನ್ನೂ ಓದಿ: ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ
Advertisement
Advertisement
ದಾಖಲೆ ಶತಕ: 15ನೇ ಆವೃತ್ತಿಯಲ್ಲಿ ಫಾರ್ಮ್ನಲ್ಲಿರುವ ಜಾಸ್ ಬಟ್ಲರ್ 103 ರನ್ (61 ಬಾಲ್, 9 ಬೌಂಡರಿ, 5 ಸಿಕ್ಸರ್) ಮತ್ತೊಮ್ಮೆ ಅಬ್ಬರಿಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಬಟ್ಲರ್, ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದರು. ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಬಟ್ಲರ್, ಐಪಿಎಲ್ ಆವೃತ್ತಿಯ 3ನೇ ಹಾಗೂ ಈ ಸೀಸನ್‌ನ 2ನೇ ಶತಕ ದಾಖಲಿಸಿ ಮಿಂಚಿದರು. ಇಡೀ ಐಪಿಎಲ್ ಆವೃತ್ತಿಯಲ್ಲಿ ಒಂದೇ ಐಪಿಎಲ್‌ನಲ್ಲಿ 2 ಬಾರಿ ಶತಕ ಸಿಡಿಸಿ ದಾಖಲೆಯನ್ನೂ ನಿರ್ಮಿಸಿದರು. ಇದನ್ನೂ ಓದಿ: 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್
Advertisement
Advertisement
ಜಾಸ್ ಬಟ್ಲರ್ ಅವರಿಗೆ ಉತ್ತಮ ಸಾಥ್ ನೀಡಿದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ 24(18) ಮೊದಲ ವಿಕೆಟ್‌ಗೆ 97 ರನ್‌ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಬಂದ ನಾಯಕ ಸಂಜೂ ಸ್ಯಾಮ್ಸನ್ 38(19) ಬಿರುಸಿನ ಆಟದ ಮೂಲಕ ತಂಡದ ರನ್‌ವೇಗವನ್ನು ಹೆಚ್ಚಿಸಿದರು. ಅಲ್ಲದೆ ಬಟ್ಲರ್ ಹಾಗೂ ಸ್ಯಾಮ್ಸನ್ 2ನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟವಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಶಿಮ್ರಾನ್ ಹೆಟ್ಮಾಯೆರ್ 26*(13) ಉಪಯುಕ್ತ ಕಾಣಿಕೆ ನೀಡಿದರೆ. ರಿಯಾನ್ ಪರಾಗ್(5) ಹಾಗೂ ಕರುಣ್ ನಾಯರ್(3) ಬಹುಬೇಗನೆ ವಿಕೆಟ್ ಒಪ್ಪಿಸಿ ಹೊರನಡೆದರು. ಕೆಕೆಆರ್ ಪರ ಸುನೀಲ್ ನರೈನ್ 2/21, ಪ್ಯಾಟ್ ಕಮ್ಮಿನ್ಸ್ 1/50, ಶಿವಂ ಮಾವಿ 1/34 ಹಾಗೂ ಆಂಡ್ರೆ ರಸೆಲ್ 1/29 ವಿಕೆಟ್ ಪಡೆದರು.
ಐಯ್ಯರ್, ಫಿಂಚ್ ಮಿಂಚಿನಾಟ ವ್ಯರ್ಥ: ರಾಜಸ್ಥಾನ್ ನೀಡಿದ 217 ರನ್‌ಗಳ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡ ಆರಂಭದಲ್ಲೇ ಎಡವಿತು. ಮೊದಲ ಓವರ್ ಮೊದಲ ಬಾಲ್‌ನಲ್ಲೇ ಸಿಂಗಲ್ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಸುನೀಲ್ ನರೇನ್ ರನ್‌ಔಟ್‌ಗೆ ಗುರಿಯಾದರು. ನಂತರ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಹಾಗೂ ಫಿಂಚ್ ಜೋಡಿ ಉತ್ತಮ ಪ್ರದರ್ಶನ ನೀಡಿತು. ಆರನ್ ಫಿಂಚ್ 28 ಎಸೆತಗಳಲ್ಲಿ 58 (9 ಬೌಂಡರಿ, 2 ಸಿಕ್ಸರ್) ಗಳಿಸಿ ನಿರ್ಗಮಿಸಿದರು. 2ನೇ ಬ್ಯಾಟಿಂಗ್‌ನಲ್ಲಿ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ 85 ರನ್ (7 ಬೌಂಡರಿ, 4 ಸಿಕ್ಸರ್) ಗಳಿಸಿ ಆಡುತ್ತಿದ್ದಂತೆಯೇ ಯಜುವೇಂದ್ರ ಚಾಹಲ್‌ಗೆ ತಮ್ಮ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಭರವಸೆಯ ಆಟಗಾರ ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಆಂಡ್ರೆರಸ್ಸಲ್ ಮೊದಲ ಎಸೆತದಲ್ಲೇ ರವಿಚಂದ್ರನ್ ಅಶ್ವಿನ್‌ಗೆ ತಮ್ಮ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ಮತ್ತಷ್ಟು ಪೆಟ್ಟು ನೀಡಿತು.
ಕೊನೆಯಲ್ಲಿ ಬಂದ ಉಮೇಶ್ ಯಾದವ್ 9 ಬಾಲ್‌ಗೆ 21 ರನ್‌ಗಳಿಸಿ ಮತ್ತೆ ತಂಡದಲ್ಲಿ ಗೆಲುವಿನ ಕನಸು ಮೂಡಿಸಿದ್ದರು. ಈ ನಡುವೆ ಒಬೆಟ್ ಮಕಾಯ್ ಅವರಿಗೆ ವಿಕೆಟ್ ಒಪ್ಪಿಸಿದ್ದರಿಂದ ನಂತರದ ಆಟಗಾರರು ತಂಡವನ್ನು ಮುನ್ನಡೆಸುವಲ್ಲಿ ವಿಫಲಾದರು.
ರನ್ ಏರಿದ್ದು ಹೇಗೆ?
3ನೇ ಓವರ್ 25 ರನ್
4ನೇ ಓವರ್ 40 ರನ್
19ನೇ ಓವರ್ 199
20ನೇ ಓವರ್ 217 ರನ್