ನವದೆಹಲಿ: ನೀವು ಬಿಕಿನಿ (Bikini) ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಂ (Muslim) ಹೆಣ್ಣುಮಕ್ಕಳು ಹಿಜಬ್ (Hijab) ಧರಿಸುತ್ತಾರೆ. ಬಿಜೆಪಿ (BJP) ಹಿಜಬ್ ಧರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ಭವಿಷ್ಯದಲ್ಲಿ ಹಿಜಬ್ ಧರಿಸಿದ ಮುಸ್ಲಿಂ ಮಹಿಳೆ ದೇಶದ ಪ್ರಧಾನಿ (Prime Minister) ಆಗಬಹುದು ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಭವಿಷ್ಯ ನುಡಿದಿದ್ದಾರೆ.
ಹಿಜಬ್ ಕುರಿತಾಗಿ ಸುಪ್ರೀಂಕೋರ್ಟ್ (Supreme Court) ನೀಡಿರುವ ತೀರ್ಪಿನ ಕುರಿತಾಗಿ ಮಾತನಾಡಿದ ಅವರು, ಹಿಜಬ್ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದೆ. ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಹಿಜಬ್ ತೆಗೆಯಲು ಬಿಜೆಪಿ ಯತ್ನಿಸುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸಲು ಆಸಕ್ತಿ ವಹಿಸಿದ್ದಾರೆ. ಹಿಜಬ್ ಧರಿಸುವಂತೆ ಯಾರೂ ಅವರನ್ನು ಬಲವಂತಪಡಿಸಿಲ್ಲ. ಅವರ ಸ್ವಇಚ್ಚೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?
ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಕೊಡುಗೆಯೂ ಅಪಾರವಾಗಿದೆ. ಹೈದರಾಬಾದ್‍ನಲ್ಲಿ ಹಲವು ಮಹಿಳೆಯರು ಡ್ರೈವರ್‌ಗಳಾಗಿ ವಾಹನ ಚಲಾಯಿಸುತ್ತಿದ್ದಾರೆ. ಅವರಿಗೆ ಯಾರೂ ಹಿಜಬ್ ಧರಿಸುವಂತೆ ಒತ್ತಾಯಿಸುತ್ತಿಲ್ಲ. ಅವರು ತಮ್ಮ ಇಚ್ಚೆಯ ಪ್ರಕಾರ ಧರಿಸುತ್ತಿದ್ದಾರೆ. ಹಿಂದೂ, ಸಿಖ್, ಕ್ರಿಶ್ಚಿಯನ್ ಮಕ್ಕಳು ತಮ್ಮ ಧರ್ಮದ ಉಡುಪು ಧರಿಸಿ ಶಾಲೆಗೆ ತೆರಳಲು ಅನುಮತಿ ಇದೆ. ಆದರೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಹಿಜಬ್‍ಗೆ ಅವಕಾಶ ಕೊಡುತ್ತಿಲ್ಲ. ಈ ತಾರತಮ್ಯ ಯಾಕೆ? ಒಂದು ದಿನ ಹಿಜಬ್ ಧರಿಸಿದ ಮುಸ್ಲಿಂ ಮಹಿಳೆ ಭಾರತದ ಪ್ರಧಾನಿಯಾಗುತ್ತಾರೆ. ಇದು ನನ್ನ ಕನಸು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ರೂಪದ ಆಕೃತಿ ಪತ್ತೆ – ವೈಜ್ಞಾನಿಕ ಪರೀಕ್ಷೆ ಸಾಧ್ಯವಿಲ್ಲ ಎಂದು ಕೋರ್ಟ್
ವಿಶ್ವಾದ್ಯಂತ ಸುದ್ದಿಯಾಗಿದ್ದ ಕರ್ನಾಟಕದ ಹಿಜಬ್ ನಿಷೇಧ (Karnataka Hijab Ban) ಪ್ರಕರಣ ಇನ್ನಷ್ಟು ದಿನಗಳ ಕಾಲ ನಡೆಯಲಿದೆ. ನಿನ್ನೆ ಸುಪ್ರೀಂಕೋರ್ಟ್‌ನಿಂದ (Supreme Court) ಭಿನ್ನ ತೀರ್ಪು ಪ್ರಕಟವಾಗಿದ್ದು, ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಾಧೀಶರು ಇರುವ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.