ದಾವಣಗೆರೆ: ಜಿಎಸ್ ಟಿ ಹೆಸರಲ್ಲಿ ಉದ್ಯಮಿ ಅಕೌಂಟ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮಂಗಮಾಯವಾಗಿರೋ ಘಟನೆಯೊಂದು ನಡೆದಿರುವ ಬಗ್ಗೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ದಾವಣಗೆರೆಯ ಪೂಜಾರ್ ಪ್ರೋಸೆಸ್ ಕಂಪನಿಗೆ ಸೇರಿದ ಅಕೌಂಟ್ ನಿಂದ 24 ಲಕ್ಷ ರೂಪಾಯಿ ಹಣ ಮಾಯವಾಗಿದೆ. ಕಂಪನಿ ಮಾಲೀಕ ನಾಗರಾಜ್ ಕೆಲ ಚೆಕ್ ಗಳನ್ನು ಗ್ರಾಹಕರಿಗೆ ನೀಡಿದ್ರು. ಆದ್ರೆ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಅಂತಾ ಗ್ರಾಹಕರು ಆರೋಪಿಸಿದ್ರು.
Advertisement
Advertisement
ಮೊನ್ನೆ ಲಕ್ಷಾಂತರ ರೂಪಾಯಿ ಖಾತೆಯಲ್ಲಿತ್ತು. ಇದೀಗ ಝಿರೋ ಬ್ಯಾಲೆನ್ಸ್ ನಿಂದ ಆಘಾತಗೊಂಡು ಬ್ಯಾಂಕ್ ಗೆ ಹೋಗಿ ವಿಚಾರಿಸಿದ್ರು. ನೀವು ಜಿಎಸ್ ಟಿ ಕಟ್ಟಿಲ್ಲ. ಅದಕ್ಕೆ ಬಹುಶಃ ಮುಟ್ಟುಗೋಲು ಹಾಕಿಕೊಂಡಿರಬಹುದು. ನಮ್ಮಿಂದ ಯಾವುದೇ ತೊಂದರೆಯಾಗಿಲ್ಲ ಅಂತಾ ಬ್ಯಾಂಕ್ ಆಫ್ ಇಂಡಿಯಾ ಸಮರ್ಥಿಸಿಕೊಂಡಿದೆ.
Advertisement
ಈ ಕಡೆ ಜಿಎಸ್ ಟಿ ಆಫೀಸ್ ಗೆ ಹೋಗಿ ಕೇಳಿದ್ರೆ ನಾವು ಹಣ ಮುಟ್ಟುಗೋಲು ಹಾಕಿಕೊಳ್ಳುವಾಗ ಗ್ರಾಹಕರಿಗೆ ನೋಟಿಸ್ ಕೊಡ್ತಿವಿ. ಜಿಎಸ್ ಟಿ ಜಾರಿಗೆ ಬಂದಾಗಿನಿಂದ ಪ್ರತಿ ತಿಂಗಳು ತಪ್ಪದೆ ಜಿಎಸ್ ಟಿ ಕಟ್ಟಿಕೊಂಡು ಬಂದಿದ್ದಾರೆ. ಕಳೆದ ತಿಂಗಳು ಮಾತ್ರ ಸರ್ವರ್ ಬ್ಯುಸಿ ಇದ್ದುದರಿಂದ ಒಂದು ದಿನ ತಡವಾಯಿತು. ಅಲ್ಲದೆ 5 ಬಾರಿ ಪ್ರಯತ್ನ ಮಾಡಿದ್ರು ಟ್ರಾನ್ಷೇಷನ್ ಫೇಲ್ ಆಗುತ್ತಾ ಬಂದಿತು. ಕೊನೆಯ ಬಾರಿ ಕಳುಹಿಸಿದಾಗ ಸಕ್ಸಸ್ ಆಯ್ತು. ಆದ್ರೆ ಈಗ ನೋಡಿದ್ರೆ ನಮ್ಮ ಖಾತೆಯಲ್ಲಿ ಹಣವನ್ನು ಮುಟ್ಟುಗೋಲು ಆಗಿದೆ. ಇದು ಬ್ಯಾಂಕ್ ನವರ ಎಡವಟ್ಟೋ ಇಲ್ಲ ಜಿಎಸ್‍ಟಿ ಯವರ ಯಡವಟ್ಟೋ ಗೊತ್ತಿಲ್ಲ. ಬ್ಯಾಕ್ ನಲ್ಲಿ ಅಕೌಂಟ್ ಸ್ಟೇಟಸ್ ತೆಗೆಸಿದ್ರೆ ಜಿ ಎಸ್ ಟಿ ರಿಕವರಿ ಎಂದು ತೋರಿಸುತ್ತಿದೆ ಅಂತ ಹೇಳಿಕೆ ನೀಡಿದ್ದಾರೆ.