ಬೆಂಗಳೂರು ಮೂಲದ ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಹೆಸರಿನ ಜೊತೆ ಬಾಲಿವುಡ್ ನಟಿಯೊಬ್ಬರ ಹೆಸರು ಕೇಳಿ ಬರುತ್ತಿದೆ. ಖ್ಯಾತ ನಟ ದಿ.ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ (Rhea Chakraborty) ಜೊತೆ ನಿಖಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಧಿಕೃತವಾಗಿ ಈ ಕುರಿತು ಇಬ್ಬರೂ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿದ್ದರೂ, ಅದು ನಿಜ ಎಂದು ಹೇಳಲಾಗುತ್ತಿದೆ.
ಮಾನುಷಿ ಚಿಲ್ಲರ್ ಜೊತೆ ಬ್ರೇಕ್ ಅಪ್?
ನಟಿ ಮಾನುಷಿ ಚಿಲ್ಲರ್(Manushi Chillar) ಸಿನಿಮಾಗಿಂತ ತಮ್ಮ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿರುತ್ತಾರೆ. ಬಿಟೌನ್‌ನಲ್ಲಿ ಈ ಹಿಂದೆ ಮಾನುಷಿ ಡೇಟಿಂಗ್ ಸುದ್ದಿಯೇ ಸಖತ್ ಸದ್ದು ಮಾಡಿತ್ತು. ಇದೇ Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ಮಾನುಷಿ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು.
ಅಕ್ಷಯ್ ಕುಮಾರ್(Akshay Kumar) ನಟನೆಯ `ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಇದೀಗ ಸಾಕಷ್ಟು ಚಿತ್ರಗಳ ಆಫರ್ಸ್ ಅರಸಿ ಬಂದವು. ಇದರ ಮಧ್ಯೆ ಮಾನುಷಿ ಉದ್ಯಮಿ(Bengaluru Based Businessman) ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಸುದ್ದಿಯಾಗಿತ್ತು. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.
ಅದಕ್ಕೆ ಪೂರಕ ಎನ್ನುವಂತೆ ಈ ಜೋಡಿ, ರಿಷಿಕೇಶಕ್ಕೆ ಒಟ್ಟಿಗೆ ಹೋಗಿದ್ದರು. ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎಂದು ಹೇಳಲಾಗಿತ್ತು. ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಈಗ ನೋಡಿದರೆ ಮತ್ತೋರ್ವ ಹುಡುಗಿಯ ಹೆಸರು ಕಾಮತ್ ಹೆಸರಿನ ಜೊತೆ ತಳುಕು ಹಾಕಿಕೊಂಡಿದೆ.
ಬೆಂಗಳೂರಿನ ಮೂಲದ ಬ್ಯುಸಿನೆಸ್ ಮ್ಯಾನ್ ಆಗಿರುವ ನಿಖಿಲ್ ಕಾಮತ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜೊತೆ ವಿವಾಹವಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]