ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಈ ಬಾರಿ ಪೊಲೀಸರಿಂದ ಅಲ್ಲ, ರೌಡಿಗಳಿಂದಲೂ ಅಲ್ಲ. ಉದ್ಯಮಿಯೊಬ್ಬ ತನ್ನ ಪತ್ನಿ ಮೆಲೆಯೇ ಫೈರಿಂಗ್ ಮಾಡಿದ್ದಾನೆ.
ಕಳೆದ ರಾತ್ರಿ ಉದ್ಯಮಿ ಗಣೇಶ್ ಎಂಬಾತ ತನ್ನ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಜಯನಗರದ ನಾಲ್ಕನೆ ಬ್ಲಾಕ್‍ನಲ್ಲಿ ನಡೆದಿದೆ.
ಹಣಕಾಸು ವಿಚಾರವಾಗಿ ದಂಪತಿ ಮಧ್ಯೆ ಕಲಹ ಏರ್ಪಟ್ಟು, ಕೋಪದ ಭರದಲ್ಲಿ ಪತ್ನಿ ಸಹನಾಳನ್ನು ಗಣೇಶ್ ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಘಟನೆ ನಡೆದ ಬಳಿಕ ಗಣೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಜಯನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಎಸ್ಕೇಪ್ ಆಗಿರೋ ಗಣೇಶ್‍ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.