40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ಮಾಡಿದರೆ ಅಂಗಡಿ ಬಂದ್‌: ಬಿಬಿಎಂಪಿ ಮಾರ್ಗಸೂಚಿಯಲ್ಲಿ ಏನಿದೆ?

Public TV
1 Min Read
Business road

– ವ್ಯಾಪಾರ ಪರವಾನಗಿ ನವೀಕರಣಕ್ಕೆ ಫೆ.28 ಕೊನೆಯ ದಿನ
– 5 ವರ್ಷಗಳ ಅವಧಿಗೆ ನವೀಕರಣ

ಬೆಂಗಳೂರು: 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ (2015 ರ ನಂತರ ತೆರೆದ ಅಂಗಡಿಗಳು) ವ್ಯಾಪಾರ ಪರವಾನಗಿಗಳನ್ನು ಇನ್ನು ಮುಂದೆ ನವೀಕರಿಸಲಾಗುವುದಿಲ್ಲ ಎಂದು ಬಿಬಿಎಂಪಿ (BBMP) ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಫೆ.28ರ ಒಳಗಡೆ 2025-26ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣ ಮಾಡಬೇಕೆಂದು ಬಿಬಿಎಂಪಿ ಸೂಚಿಸಿದೆ. ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ  ನವೀಕರಣ ಮಾಡಬಹುದಾಗಿದೆ.

Business on roads narrower than 40 ft will have to shut shop BBMP Guidelines allow businesses to renew trade licence for up to 5 years 1

ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಇನ್ಫಿ ಸಹ ಸಂಸ್ಥಾಪಕ ಕ್ರಿಸ್ ಸೇರಿ 18 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್

ಕಳೆದ ಸಾಲಿನಂತೆ ಉದ್ದಿಮೆ ಪರವಾನಿಗೆ ಶುಲ್ಕವನ್ನು ಆನ್‌ಲೈನ್ ಮುಖಾಂತರ ಮಾಡಬೇಕು. ಫೆ.1 ರಿಂದ ಫೆ. 28ರ ವರೆಗೆ ದಂಡವಿಲ್ಲದೇ ಪರವಾನಿಗೆ ಶುಲ್ಕವನ್ನು ಪಾವತಿಸಬಹುದು.

Business on roads narrower than 40 ft will have to shut shop BBMP Guidelines allow businesses to renew trade licence for up to 5 years 2

 

ದಂಡ ಎಷ್ಟು?
ಫೆ.28 ಗಡವು ಮುಗಿದ ಬಳಿಕ ದಂಡ ವಿಧಿಸಲಾಗುತ್ತದೆ. ಮಾರ್ಚ್‌ 1 ರಿಂದ 31ರವರೆಗೆ ಪರವಾನಿಗೆ ನವೀಕರಣ ಶುಲ್ಕದ 25% ರಷ್ಟು ದಂಡ ಮೊತ್ತದೊಂದಿಗೆ ಪಾವತಿಸಿಕೊಳ್ಳಬೇಕಾಗುತ್ತದೆ.

ಏಪ್ರಿಲ್‌ 1 ರಿಂದ ಪರವಾನಿಗೆ ಶುಲ್ಕದ 100% ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.

 

Share This Article