ಹಾಸನ : ಸಾರಿಗೆ ಬಸ್‍ಗೆ ದಾರಿ ಬಿಡದೇ ಪುಂಡಾಟ ಮೇರೆದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ವೈ.ಎನ್.ಪುರ ಬಳಿ ನಡೆದಿದೆ.
ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ತನ್ನ ಹಿಂದೆ ಸಾರಿಗೆ ಬಸ್ ಬರುತ್ತಿದ್ದರು ಕೂಡ ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತಾ ಬಸ್‍ಗೆ ಅಡ್ಡ ಬರುತ್ತಿದ್ದ. ಡ್ರೈವರ್ ಹಾರ್ನ್ ಮಾಡಿದರೂ ಕೂಡ ರಸ್ತೆ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಗ್‍ಜಾಗ್ ಮಾದರಿಯಲ್ಲಿ ಬೈಕ್ ಚಲಾಯಿಸಲಾರಂಭಿಸಿದ್ದಾನೆ. ಇದರಿಂದ ಬಸ್ ಚಾಲಕನಿಗೆ ಬೈಕ್ ಬಿಟ್ಟು ಮುಂದೆ ಹೋಗಲು ಸಾಧ್ಯವಾಗಿಲ್ಲ. ಇದರ ಜೊತೆ ಆ ರಸ್ತೆಯಲ್ಲಿ ಬರುತ್ತಿದ್ದ ಇತರೆ ವಾಹನ ಸವಾರರಿಗೆ ಯುವಕನ ವರ್ತನೆಯಿಂದ ಸಾಕಷ್ಟು ತೊಂದರೆ ಆಗಿದೆ. ಇದನ್ನೂ ಓದಿ:ವಾಕಿಂಗ್ ಹೋಗಿದ್ದ ಪಾದಚಾರಿ ಮೇಲೆ ಹರಿದ ಲಾರಿ – ಸ್ಥಳದಲ್ಲಿಯೇ ಮಹಿಳೆ ಸಾವು
ಯುವಕ ಬೈಕ್‍ನಲ್ಲಿ ಸಾರಿಗೆ ಬಸ್‍ಗೆ ಅಡ್ಡ ಬರುವುದನ್ನು ಬಸ್‍ನಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ನಂತರ ಮತ್ತೊಂದು ಬೈಕ್‍ನಲ್ಲಿ ಬಂದ ಕೆಲವರು ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಯುವಕ ಕುಡಿದು ಈ ರೀತಿ ಬೈಕ್ ಚಲಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನನ್ನು ಹಿಡಿದು ಗೂಸಾ ಕೊಟ್ಟ ನಂತರ ಆತನ ಪುಂಡಾಟ ನಿಂತಿದ್ದು, ನಂತರ ಬಸ್ ಸರಾಗವಾಗಿ ಚಲಿಸಿದೆ.
https://www.youtube.com/watch?v=C5sp5vK0bpY