ಹಾವೇರಿ: ರಸ್ತೆ ಮಧ್ಯೆ ಬಸ್ ನಿಲ್ಲಿಸಿ ನಮಾಜ್ (Namaz) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಾಜ್ ಮಾಡಿದ ಡ್ರೈವರ್ (Driver) ಕಂ ಕಂಡಕ್ಟರ್‌ನನ್ನು ಅಮಾನತು (Suspend) ಮಾಡಲಾಗಿದೆ.
ಎಆರ್ ಮುಲ್ಲಾ ಅಮಾನತುಗೊಂಡ ಡ್ರೈವರ್. ವಿಶಾಲಗಡದಿಂದ ಹಾನಗಲ್‌ಗೆ ಬರುವ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಎಆರ್ ಮುಲ್ಲಾ ನಮಾಜ್ ಮಾಡಿದ್ದರು. ಬಸ್ಸಿನಲ್ಲಿಯೇ ನಮಾಜ್ ಮಾಡಿದ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ಮೇಲೆ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: Haveri | ಮಾರ್ಗ ಮಧ್ಯೆ ಸಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಡ್ರೈವರ್
ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಸ್‌ನಲ್ಲಿ ನಮಾಜ್ ಮಾಡಿದ್ದ ಡ್ರೈವರ್ ಮೇಲೆ ತನಿಖೆಗೆ ಸೂಚಿಸಿದ್ದರು. ಸಾರಿಗೆ ಸಚಿವರ ಸೂಚನೆ ಹಿನ್ನೆಲೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತನಿಖೆ ನಡೆಸಿ ಚಾಲಕ ಎಆರ್ ಮುಲ್ಲಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಡ್ರೈವರ್ ನಮಾಜ್ – ತನಿಖೆಗೆ ರಾಮಲಿಂಗಾ ರೆಡ್ಡಿ ಆದೇಶ