ಕಲಬುರಗಿ: ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಕಳ್ಳತನವಾಗಿದ್ದ ಸಾರಿಗೆ ಬಸ್ (Bus) ಪ್ರಕರಣ ಸುಖಾಂತ್ಯ ಕಂಡಿದ್ದು, ಬಸ್ ಕಳ್ಳತನ ಮಾಡಿದ ಕಿರಾತಕರು ಪೊಲೀಸರಿಗೆ ಹೆದರಿ ಪಕ್ಕದ ರಾಜ್ಯ ತೆಲಂಗಾಣದ (Telangana) ಬಳಿ ಬಸ್ ಬಿಟ್ಟು ಪರಾರಿಯಾಗಿದ್ದು, ಇದೀಗ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮಂಗಳವಾರ ನಸುಕಿನ ಜಾವ ಕಲಬುರಗಿ (Kalaburagi) ಜಿಲ್ಲೆ ಚಿಂಚೋಳಿ ತಾಲೂಕಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬೀದರ್ ಡಿಪೋದ ಕೆಎ 38, ಎಫ್ 971 ಬಸ್ ಕಳ್ಳತನಾಗಿತ್ತು. ಇದರಿಂದ ಸಾರಿಗೆ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯ ನಿದ್ದೆಗೆಡಿಸಿತ್ತು. ಹೀಗಾಗಿ ಹೇಗಾದರೂ ಮಾಡಿ ಕಳುವಾದ (Theft) ಬಸ್ ಪತ್ತೆ ಹಚ್ಚಲೇಬೇಕು ಎಂದು ಚಿಂಚೋಳಿ ಪೊಲೀಸರ ಜೊತೆ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಚರಣೆ ಆರಂಭಿಸಿದ್ದರು.
Advertisement
Advertisement
ಬಸ್ ಯಾವ ಮಾರ್ಗದಲ್ಲಿ ಹೋಗಿದೆ ಅಂತಾ ತನಿಖೆ ಆರಂಭಿಸಿದಾಗ ಕರ್ನಾಟಕದ ಗಡಿಯಿಂದ ತೆಲಂಗಾಣ ರಾಜ್ಯದ ಕಡೆ ಹೋಗಿರುವುದು ಸಿಸಿಟಿವಿ ಮೂಲಕ ಖಚಿತ ಮಾಡಿಕೊಂಡಿದ್ದಾರೆ. ಅದಾದ ಬಳಿಕ ಸಾರಿಗೆ ಇಲಾಖೆ ಅಧಿಕಾರಿಗಳ 4 ತಂಡ ಹಾಗೂ ಚಿಂಚೋಳಿ ಪೊಲೀಸರು ತೆಲಂಗಾಣ ಪೊಲೀಸರ ಸಹಾಯ ಪಡೆದು ಬಸ್ ಹುಡುಕಾಟ ನಡೆಸಿದಾಗ, ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂಕೈಲಾಸ ತಾಂಡಾದ ಹೊರವಲಯದಲ್ಲಿ ಕಳ್ಳತನವಾಗಿದ್ದ ಬಸ್ ಪತ್ತೆಯಾಗಿದೆ. ಇದನ್ನೂ ಓದಿ: ಮೋದಿಯ ಡೈನಾಮಿಕ್ ನಾಯಕತ್ವ ಬಂದ್ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಳ – ಜೆ.ಪಿ.ನಡ್ಡಾ
Advertisement
Advertisement
ಸದ್ಯ ಬಸ್ ಸಿಕ್ಕ ಖುಷಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಅಷ್ಟಕ್ಕೂ ಸಾರಿಗೆ ಇಲಾಖೆಗೆ ಸೇರಿದ ಬಸ್ಸನ್ನೇ ಈ ಖತರ್ನಾಕ್ ಕಳ್ಳರು ಯಾಕೆ ಟಾರ್ಗೆಟ್ ಮಾಡಿದ್ದರು. ಅದಾದ ಬಳಿಕ ತೆಲಂಗಾಣದಲ್ಲಿ ಬಸ್ ಬಿಟ್ಟು ಯಾಕೆ ಪರಾರಿಯಾದರು ಎಂಬುದರ ಬಗ್ಗೆ ಇದೀಗ ಹತ್ತು ಹಲವು ಅನುಮಾನಗಳು ಮೂಡಿದ್ದು, ಸಾರಿಗೆ ಇಲಾಖೆಯಲ್ಲಿ ಅಮಾನತು ಆದವರೇ ಈ ಕೃತ್ಯ ನಡೆಸಿರುವ ಶಂಕೆ ಸದ್ಯ ವ್ಯಕ್ತವಾಗುತ್ತಿದ್ದು, ಇದೀಗ ಬಸ್ ಕಳ್ಳತನ ಮಾಡಿದ ಖತರ್ನಾಕ್ ಕಳ್ಳರಿಗಾಗಿ ಚಿಂಚೋಳಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಇಲಾಖೆಯಿಂದ BSNL ಗೆ ಗುಡ್ ಬೈ – ಜಿಯೋಗೆ ಹಾಯ್
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Your article gave me a lot of inspiration, I hope you can explain your point of view in more detail, because I have some doubts, thank you.