ಬೆಂಗಳೂರು/ಆನೇಕಲ್: ಸಾರ್ವಜನಿಕ ಬಸ್ ನಿಲ್ದಾಣ ರಾತ್ರೋ ರಾತ್ರಿ ಮಾಯವಾಗಿರುವ ಘಟನೆ ಕೆ.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Advertisement
ಕೆ.ಆರ್ ಪುರದ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿರುವ ಆನಂದಪುರದ ಬಸ್ ನಿಲ್ದಾಣದಲ್ಲಿ ಕಬ್ಬಿಣದ ಶೆಲ್ಟರ್‌ನನ್ನೇ ಕಳ್ಳತನ ಮಾಡಿದ್ದು, ಆ ಮುಖ್ಯರಸ್ತೆಯಲ್ಲಿ ಹಲವು ವರ್ಷಗಳಿಂದ ಬಸ್ ನಿಲ್ದಾಣವಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅರಗ ಜ್ಞಾನೆಂದ್ರಗೆ ತಾವು ಸಚಿವರು ಅಂತ ಜ್ಞಾನವಿರಲಿ: ಎಚ್. ಕೆ. ಪಾಟೀಲ್
Advertisement
Advertisement
ಶುಕ್ರವಾರ ರಾತ್ರಿ ಕಿಡಿಗೇಡಿಗಳು ಕಬ್ಬಿಣದಿಂದ ನಿರ್ಮಿಸಿದ್ದ ಬಸ್ ನಿಲ್ದಾಣವನ್ನು ವೆಲ್ಡಿಂಗ್ ಕಟರ್ ಮೂಲಕ ಕಟ್ ಮಾಡಿ ಕದ್ದೊಯ್ದಿದ್ದಾರೆ. ಇನ್ನು ಆರ್.ಎನ್.ಎಸ್ ಕಾಂಪ್ಲೆಕ್ಸ್ ಮೇಲೆ ಬಸ್ ನಿಲ್ದಾಣ ನಿರ್ಮಾಣದ ಬಳಿಕ ಇದರ ಹಿಂದೆ ಇದ್ದ ಸೈಟ್ ನಲ್ಲಿ ಆರ್‌ಎನ್ಎಸ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಅದರಲ್ಲಿ ರೂಟ್ ಅಂಡ್ ಶೂಟ್ಸ್ ಫ್ರೂಟ್ಸ್ ಮಳಿಕೆ ಹಾಗೂ ಮಂಜುನಾಥ ನೇತ್ರಾಲಯ ಆಸ್ಪತ್ರೆಗೆ ಬಾಡಿಗೆ ನೀಡಲಾಗಿತ್ತು.
Advertisement
ಆನಂದಪುರ ಮುಖ್ಯರಸ್ತೆಯಲ್ಲಿನ ಈ ಕಾಂಪ್ಲೆಕ್ಸ್‌ಗೆ ಬಸ್ ನಿಲ್ದಾಣ ಅಡ್ಡಲಾಗಿತ್ತು. ಇದರಿಂದ ಬ್ಯುಸಿನೆಸ್ ಸಹ ಕಡಿಮೆ ಆಗಿತ್ತು. ಈ ಬಸ್ ನಿಲ್ದಾಣವನ್ನು ಹೇಗಾದರೂ ತೆರವು ಮಾಡಬೇಕೆಂದು ಹಲವು ವರ್ಷಗಳಿಂದ ಕಾಯುತ್ತಿದ್ದು, ಶುಕ್ರವಾರ ವೆಲ್ಡಿಂಗ್ ಕಟರ್ ಮೂಲಕ ರಾತ್ರೋ ರಾತ್ರಿ ಬಸ್ ನಿಲ್ದಾಣದ ಶೆಲ್ಟರ್‌ನನ್ನೇ ಕದ್ದಿದ್ದಾರೆ ಎಂದು ಸ್ಥಳೀಯರಾದ ಲಕ್ಷ್ಮಣ್ ಆರೋಪಿಸಿದ್ದಾರೆ. ಜೊತೆಗೆ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ವಶಕ್ಕೆ ಪಡೆದಿದ್ದು ಬಸ್ ನಿಲ್ದಾಣ ಮಾಯವಾಗಿರುವ ಕುರಿತು ತನಿಕೆ ಕೈಗೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಆರ್ ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ:ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್