ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ರೋಡ್ ಡಿವೈಡರ್ ಮೇಲೆ ಹತ್ತಿರುವ ಘಟನೆ ಸಿಲಿಕಾನ್ ಸಿಟಿಯ ಜಯನಗರದಲ್ಲಿ ನಡೆದಿದೆ.
ಜಯನಗರದ ಸೌತ್ ಎಂಡ್ ಸರ್ಕಲ್ ಕಡೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಈ ಅವಘಡ ನಡೆದಿದ್ದು, ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ರೋಡ್ ಡಿವೈಡರ್ ಮೇಲೆ ಬಸ್ ಹತ್ತಿದೆ.
Advertisement
Advertisement
ಬಸ್ಸಿನಲ್ಲಿ ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ. ಅದೃಷ್ಟವಶಾತ್ ಯಾರಿಗೆ ಏನು ಆಗಿಲ್ಲ. ಡಿವೈಡರ್ ಬಳಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಡಿವೈಡರ್ ಮೇಲೆ ನಿಂತಿದೆ. ಡಿವೈಡರ್ ಮೇಲೆ ಬಸ್ ನಿಂತ ಪರಿಣಾಮ ಕ್ರೈನ್ ಮೂಲಕ ಬಸ್ ಇಳಿಸುವ ಪ್ರಯತ್ನ ನಡೆದಿದೆ.
Advertisement
ಸತತ ಒಂದು ಗಂಟೆಯ ನಂತರ ಬಸ್ಸನ್ನು ಡಿವೈಡರ್ನಿಂದ ಹೊರ ತರಲಾಗಿದೆ. ಮಾಹಿತಿ ತಿಳಿದು ಜಯನಗರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.