ಚಿಕ್ಕಬಳ್ಳಾಪುರ: ಮದುವೆ ಆರತಕ್ಷತೆಗೆ ಆಗಮಿಸಿ ವಾಪಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿ ನಡೆದಿದೆ.
Advertisement
ಬೆಳಚಿಕ್ಕನಹಳ್ಳಿ ಗ್ರಾಮದಿಂದ ಮದುವೆಯ ಆರರಕ್ಷತೆಗೆಂದು ಘಾಟಿ ದೇವಾಲಯದ ಬಳಿಯ ಖಾಸಗಿ ಕಲ್ಯಾಣ ಮಂಟಪಕ್ಕೆ ಜನ ಬಂದು ಆರತಕ್ಷತೆ ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ಈ ವೇಳೆ ಭಾರೀ ಮಳೆ ಕಾರಣ ರಸ್ತೆ ಸರಿಯಾಗಿ ಕಾಣದೆ ರಸ್ತೆಯ ತಿರುವಿನಲ್ಲಿ ಬಸ್ ರಸ್ತೆ ಬದಿಗೆ ಉರುಳಿಬಿದ್ದು ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಇಂಡಿಯಾದವ್ರು ಹೆಂಗೆ ಮಂಜಾ ಕೊಡ್ತಾರೆ ನೋಡಿ: ಜಮೀರ್
Advertisement
Advertisement
ಅಪಘಾತದಲ್ಲಿ ಗೌರಿಬಿದನೂರು ತಾಲೂಕು ತೊಂಡೆಬಾವಿ ಗ್ರಾಮದ ಶಿವಕುಮಾರ್ (56) ಹಾಗೂ ರಾಮಕೃಷ್ಣರೆಡ್ಡಿ (60) ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಗೌರಿಬಿದನೂರು ಹಾಗೂ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಯಿಗಳಿಗೆ ಉತ್ತರ ಕೊಡಲು ಸಾಧ್ಯನಾ?: ಎಚ್‍ಡಿಕೆ
Advertisement