– ಗ್ರೀನ್‍ನಲ್ಲಿ ಬಸ್, ಆರೆಂಜ್‍ನಲ್ಲಿ ಕ್ಯಾಬ್ ಸಂಚಾರ
ಬೆಂಗಳೂರು: ಮಹಾಮಾರಿ ಕೊರೊನಾ ಕಂಟ್ರೋಲ್‍ಗೆ ಇನ್ನೂ 2 ವಾರ ಲಾಕ್‍ಡೌನ್ ವಿಸ್ತರಣೆಯಾಗಿದೆ. ದೇಶಾದ್ಯಂತ ಮೇ 17ವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಆದರೆ ಇದೇ ವೇಳೆ ವಲಸೆ ಕಾರ್ಮಿಕರು, ತುರ್ತು ಪ್ರಯಾಣಿಕರಿಗೆ ಗುಡ್‍ನ್ಯೂಸ್ ಜೊತೆಗೆ ಕೇಂದ್ರ ಸರ್ಕಾರ ಶಾಕ್ ಕೂಡ ಕೊಟ್ಟಿದೆ.
ಕೊರೊನಾ ತೊಲಗಿಸಲು ಕೇಂದ್ರ ಸರ್ಕಾರ 4 ಝೋನ್‍ಗಳಾಗಿ ವಿಂಗಡಣೆ ಮಾಡಿದೆ. ಕಂಟೈನ್‍ಮೆಂಟ್, ರೆಡ್, ಆರೆಂಜ್, ಗ್ರೀನ್ ಝೋನ್ ಅಂತ ವಿಂಗಡಣೆ ಮಾಡಿದ್ದು, ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ವಲಸೆ ಕಾರ್ಮಿಕರು, ತುರ್ತು ಪ್ರಯಾಣಿಕರು ತಮ್ಮ ತವರು ಜಿಲ್ಲೆಗಳಿಗೆ ಹೋಗುವರಿಗೆ ಕೇಂದ್ರ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸಿದೆ. ದಿನಾಂಕ 4ರಿಂದ ಅಂದರೆ ಸೋಮವಾರದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವು ಷರತ್ತುಗಳು ಅನ್ವಯ ಬಸ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಲಾಕ್‍ಡೌನ್ 3 – ಯಾವ ವಲಯದಲ್ಲಿ ಏನಿರುತ್ತೆ? ಏನಿರಲ್ಲ? ಷರತ್ತುಗಳು ಏನು?
Advertisement
Advertisement
ರಾಯಚೂರು, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಶಿವಮೊಗ್ಗ, ಮೈಸೂರು ಸೇರಿದಂತೆ 28 ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಲಿದೆ. 55 ಸೀಟ್‍ಗಳುಳ್ಳ ಬಸ್‍ನಲ್ಲಿ ಕೇವಲ 30 ಜನರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶವನ್ನ ನೀಡಲಾಗಿದೆ. ಟಿಕೆಟ್ ದರ ನಿಗದಿತ ಬೆಲೆಗಿಂತ ಒಂದು ಒಟ್ಟು ಹೆಚ್ಚು ಮಾಡಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ ಸವದಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ.
Advertisement
ಗ್ರೀನ್ ಝೋನ್‍ನಲ್ಲಿ ಶರತ್ತು ಬದ್ದ ಆಟೋ ಸಂಚಾರಕ್ಕೆ ಆವಕಾಶ ಮಾಡಿಕೊಡಲಾಗಿದೆ. ಶೇ.50 ಬಸ್‍ಗಳ ಸಂಚಾರಕ್ಕೂ ಅವಕಾಶ ನೀಡಲಾಗಿದ್ದು, ಬಸ್ ಡಿಪೋಗಳು ಕೂಡ ಶೇ.50ರಷ್ಟು ಸಿಬ್ಬಂದಿ ಜೊತೆ ಕೆಲಸ ಮಾಡಬಹುದು. ದ್ವಿಚಕ್ರ ವಾಹನದಲ್ಲಿ ಒಬ್ಬರು, ಕಾರಿನಲ್ಲಿ ಚಾಲಕ ಸೇರಿ ಇಬ್ಬರಿಗೆ ಮಾತ್ರ ಅವಕಾಶ.
Advertisement
ಆರೆಂಜ್ ಝೋನ್‍ಗಳಲ್ಲಿ ಕಾರು ಮತ್ತು ಬೈಕ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಕಾರ್ ಗಳಲ್ಲಿ ಡ್ರೈವರ್ ಜೊತೆಗೆ ಇಬ್ಬರು, ಬೈಕ್‍ನಲ್ಲಿ ಒಬ್ಬರು ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಇನ್ನೂ ಟ್ಯಾಕ್ಸಿಗಳಲ್ಲಿ ಒಬ್ಬರೇ ಪ್ಯಾಸೆಂಜರ್ ಇರಬೇಕು.
ಕೆಂಪು ವಲಯದಲ್ಲಿ ಸೈಕಲ್ ರಿಕ್ಷಾ, ಆಟೋ, ಕ್ಯಾಬ್ ಟ್ಯಾಕ್ಸಿ, ಬಸ್ ಸಂಚಾರ, ಸಲೂನು ಸಂಪೂರ್ಣ ಬಂದ್ ಆಗಿದೆ. ಆದರೆ ಖಾಸಗಿ ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಮಾತ್ರ ಸಂಚರಿಸಬಹುದು. ಕ್ಯಾಬ್‍ಗಳಲ್ಲಿ ಒಬ್ಬ ಡ್ರೈವರ್ ಮತ್ತೆ ಒಬ್ಬ ಪ್ರಯಾಣಿಕ ಮಾತ್ರ ಸಂಚರಿಸಬೇಕು. ಇನ್ನೂ ಬೈಕ್‍ಗಳಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.