ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಕಾವಾಡಿಯಲ್ಲಿ ನಡೆದಿದೆ.
Advertisement
ಹಾಸನ ಡಿಪೋಗೆ ಸೇರಿದ ಬಸ್ ಕೇರಳ ರಾಜ್ಯದ ಎರ್ನಾಕುಲಂ ನಿಂದ ಕೊಡಗಿನ ವಿರಾಜಪೇಟೆ ಮೂಲಕ ಹಾಸನಕ್ಕೆ ತೆರಳುತ್ತಿತ್ತು. ಮಂಗಳವಾರ ಮುಂಜಾನೆ 4:30ರ ವೇಳೆಗೆ ಬಸ್ ಕಂದಕಕ್ಕೆ ಉರುಳಿದೆ (Overturn). ಚಾಲಕ ಸೇರಿದಂತೆ 40 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ರಜೆ ಮುಗಿಸಿ ಸೇವೆಗೆ ಮರಳಿದ್ದ ರಾಯಚೂರಿನ ಯೋಧ ಸಾವು
Advertisement
Advertisement
ದಟ್ಟ ಮಂಜು ಕವಿದಿದ್ದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಬಸ್ ಅನ್ನು ಮೇಲೆತ್ತಿ, ಹಾಸನ ಡಿಪೋಗೆ ರವಾನೆ ಮಾಡಲಾಗಿದೆ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ – ಮಂಡ್ಯ ಪೊಲೀಸರಿಗೆ ನೆಟ್ಟಿಗರಿಂದ ಮೆಚ್ಚುಗೆ
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
At the beginning, I was still puzzled. Since I read your article, I have been very impressed. It has provided a lot of innovative ideas for my thesis related to gate.io. Thank u. But I still have some doubts, can you help me? Thanks.
Your point of view caught my eye and was very interesting. Thanks. I have a question for you.