ಗಾಂಧಿನಗರ: ಸುಮಾರು 70 ಮಂದಿ ಪ್ರಯಾಣಿಕರನ್ನು (Passengers) ಹೊತ್ತೊಯ್ಯುತ್ತಿದ್ದ ಬಸ್ (Bus) ಕಣಿವೆಗೆ ಉರುಳಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವ ಘಟನೆ ಗುಜರಾತ್‌ನ (Gujarat) ಸಪುತಾರಾದಲ್ಲಿ (Saputara) ನಡೆದಿದೆ.
ಐಷಾರಾಮಿ ಬಸ್‌ನಲ್ಲಿ ಸುಮಾರು 70 ಮಂದಿ ಪ್ರಯಾಣಿಕರಿದ್ದರು ಎಂದು ಅಂದಾಜಿಸಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸಪೂತರಾ ಪೊಲೀಸರು ಹಾಗೂ 108 ತಂಡ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮುಡಾ ಪ್ರಕರಣ ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಲಿ: ಬೊಮ್ಮಾಯಿ
ಭಾನುವಾರ ಬೆಳಗ್ಗೆ ಸೂರತ್ ಚೌಕ್ ಮಾರ್ಕೆಟ್‌ನಿಂದ ಸಪುತಾರಾಗೆ ಪ್ರವಾಸಿಗರನ್ನು ಹೊತ್ತ ಬಸ್ಸು ಸೂರತ್ ಕಡೆಗೆ ಹಿಂತಿರುಗುತ್ತಿತ್ತು. ಮಾರ್ಗಮಧ್ಯದಲ್ಲಿ ಓವರ್‌ಟೇಕ್ ಮಾಡುವಾಗ ಎದುರಿನಿಂದ ಬರುತ್ತಿದ್ದ ಟೆಂಪೋವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್ ಕಣಿವೆಗೆ ಬಿದ್ದಿದೆ. ಇದನ್ನೂ ಓದಿ: ಮುಂದಿನ ಶುಕ್ರವಾರದಿಂದ ಚಾಮುಂಡಿ ಬೆಟ್ಟದಲ್ಲಿ ಆಷಾಢ ಪೂಜೆ ಆರಂಭ – ವಿಶೇಷ ಪಾಸ್ ರದ್ದು
ಗಾಯಾಳುಗಳನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಪ್ರವಾಸಿಗರು ಸಪುತಾರಾಕ್ಕೆ ಭೇಟಿ ನೀಡಿ ಸೂರತ್‌ಗೆ ಹಿಂತಿರುಗುತ್ತಿದ್ದರು. ಸಪುತಾರಾ-ಮಲೆಗಾಂ ರಾಷ್ಟ್ರೀಯ ಹೆದ್ದಾರಿ ಘಾಟ್‌ನಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಎರಡನೇ ವಿಮಾನ ನಿಲ್ದಾಣದ ಬಗ್ಗೆ ವಿಸ್ತೃತ ಚರ್ಚೆ ಬಳಿಕ ಸೂಕ್ತ ತೀರ್ಮಾನ: ಎಂ.ಬಿ.ಪಾಟೀಲ್