ಕೋಲಾರ: ಮೊಬೈಲ್‌ನಲ್ಲಿ ರೀಲ್ಸ್ (Reels) ನೋಡುತ್ತಾ ಸರ್ಕಾರಿ ಬಸ್ ಚಾಲನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು (Bus Driver) ಸಾರಿಗೆ ಸಂಸ್ಥೆ ಅಮಾನತು ಮಾಡಿದೆ.
ಪಬ್ಲಿಕ್ ಟಿವಿ ವರದಿ ಬೆನ್ನಲ್ಲೆ ಕೋಲಾರ (Kolar) ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶ್ರೀನಿವಾಸ್ ಅಮಾನತ್ತಾದ ಸರ್ಕಾರಿ ಬಸ್ ಚಾಲಕ. ಈತ ಈ ಹಿಂದೆಯೂ ಹಲವು ಬಾರಿ ಬಸ್ ಚಾಲನೆ ಮಾಡುತ್ತಾ ಮೊಬೈಲ್ ನೋಡುತ್ತಿದ್ದ ದೂರುಗಳು ಸಹ ಬಂದಿದ್ದವು. ಅಲ್ಲದೆ ಪಬ್ಲಿಕ್ ಟಿವಿ ಚಾಲಕನ ನಿರ್ಲಕ್ಷ್ಯದ ಕುರಿತು ಜ.28ರಂದು ವರದಿ ಬಿತ್ತರಿಸಿತ್ತು. ಇದನ್ನೂ ಓದಿ: ಸಿಎಂ ಸಲಹೆಗಾರ ಹುದ್ದೆಗೆ ಬಿ.ಆರ್ ಪಾಟೀಲ್ ರಾಜೀನಾಮೆ
ಬಸ್ ಚಾಲಕ ಶ್ರೀನಿವಾಸ್‌ಗೆ ಸಹನಿರ್ವಾಹಕರು ಕೂಡಾ ಹಲವು ಬಾರಿ ಮೊಬೈಲ್ ವೀಕ್ಷಿಸುತ್ತಾ ಬಸ್ ಚಾಲನೆ ಮಾಡದಂತೆ ಸಲಹೆ ನೀಡಿದ್ದರು. ಆದರೆ ಆತ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದು, ಬಸ್ ಚಾಲಕನ ನಿರ್ಲಕ್ಷ್ಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಪ್ರಯಾಣಿಕರು ಇಂತಹ ಚಾಲಕರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದರು. ಇದನ್ನೂ ಓದಿ: Union Budget 2025 | 120 ನಗರಗಳಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ
ಹತ್ತಾರು ಪ್ರಯಾಣಿಕರ ಜೀವ ಕೈಲಿಟ್ಟುಕೊಂಡು ಮೊಬೈಲ್ ನೋಡುತ್ತಾ ನಿರ್ಲಕ್ಷ್ಯದಿಂದ ಬಸ್ ಚಾಲನೆ ಮಾಡಿದ್ದ ಕೋಲಾರದಿಂದ ಪಾವಗಡ ಮಾರ್ಗದ ಸರ್ಕಾರಿ ಬಸ್ ಚಾಲಕನನ್ನ ಸದ್ಯ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ನಿರ್ಮಲಾ ಕರ್ನಾಟಕದಿಂದ ಬಂದಿದ್ರೂ ರಾಜ್ಯವನ್ನು ನಿರ್ಲಕ್ಷಿಸಿದ್ದಾರೆ: ಜಿ.ಸಿ ಚಂದ್ರಶೇಖರ್ ಕಿಡಿ