ಧಾರವಾಡ: ಜಿಲ್ಲೆಯ ಹೊರವಲಯದ ಶ್ರೀನಗರ ರೈಲ್ವೆ ಗೇಟಿನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.
ಗುರುವಾರ ಬೆಳಗ್ಗಿನ ಜಾವ ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಿದ್ದ ಬಸ್, ರೈಲ್ವೆ ಗೇಟ್ ದಾಟುವಾಗ ಏಕಾಏಕಿ ರೈಲಿನ ಎಂಜಿನ್ ಬಂದಿದೆ. ಇದನ್ನು ನೋಡಿದ ಸಾರಿಗೆ ಬಸ್ ಚಾಲಕ 5 ಸೆಕೆಂಡಿನಲ್ಲಿ ಈ ಬಸ್‍ನ್ನು ಬಚಾವ್ ಮಾಡಿದ್ದಾರೆ.
Advertisement
ಇದು ರೈಲ್ವೆ ಗೇಟಿನ ಗೇಟ್‍ಮ್ಯಾನ್ ಅಜಾರೂಕತೆಯೋ ಅಥವಾ ರೈಲಿನ ಲೋಕೊಪೈಲಟ್‍ನ ಅಜಾರೂಕತೆಯೋ ಗೊತ್ತಿಲ್ಲ. ಆದರೆ ರೈಲಿನ ಎಂಜಿನ್ ಬಸ್ಸಿಗೆ ಡಿಕ್ಕಿ ಹೊಡೆದಿದ್ದರೆ 40ಕ್ಕೂ ಹೆಚ್ಚು ಜನರ ಜೀವ ಹೋಗುತ್ತಿತ್ತು. ಆದರೆ ಈ ಘಟನೆ ತಪ್ಪಿದೆ. ಈ ಘಟನೆಗೆ ಲೋಕೊಪೈಲಟಿನ ತಪ್ಪೇ ಕಾರಣ ಎಂದು ರೈಲ್ವೆ ಗೇಟ್ ಮ್ಯಾನ್ ಹೇಳುತ್ತಾನೆ.ಇದನ್ನೂ ಓದಿ: ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು 70 ಜನರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ
Advertisement
Advertisement
ನನಗೆ ಸಿಗ್ನಲ್ ಕೂಡಾ ಕೊಡದೇ ರೈಲು ಚಾಲಕ ಬಂದಿದ್ದಾನೆ ಎಂದು ಗೇಟ್ ಮ್ಯಾನ್ ಹೇಳಿದ್ದಾನೆ. ಜನರ ಜೀವ ಉಳಿಸಿ ಬಸ್ ಚಾಲಕ ಕೂಡ ಇದ ನಮ್ಮ ಪುಣ್ಯ, ಟ್ರೈನ್ ನೋಡಿದ ತಕ್ಷಣ ಬಸ್ ಸ್ಪೀಡ್ ಮಾಡಿದ್ದೇ ಪ್ರಯಾಣಿಕರು ಉಳಿಯಲು ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಣ್ಣು ಕೀಳಲು ಹೋದ ಬಾಲಕರಿಂದ ತಪ್ಪಿದ ರೈಲು ದುರಂತ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv