ಕಲಬುರಗಿ: ತಮ್ಮೂರಿಗೆ ಹೊರಟಿದ್ದ ಹಿಜಬ್‌ಧಾರಿ (Hijab) ವಿದ್ಯಾರ್ಥಿನಿಯರಿಗೆ, ಬುರ್ಖಾ (Burqa) ಧರಿಸಿ ಬರುವಂತೆ ಹೇಳಿ ಬಸ್ ಹತ್ತಲು ಸರ್ಕಾರಿ ಬಸ್ ಚಾಲಕ ಅವಕಾಶ ನೀಡದಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ಕಮಲಾಪುರ ತಾಲೂಕಿನಲ್ಲಿ ಘಟನೆ ನಡೆದಿದ್ದು, ಬುರ್ಖಾ ಧರಿಸಿಯೇ ಬನ್ನಿ ಎಂದು ವಿದ್ಯಾರ್ಥಿನಿಯರನ್ನು ಬಸ್‌ನಿಂದ ಚಾಲಕ ಕೆಳಗಿಳಿಸಿರುವ ಘಟನೆ ನಡೆದಿದೆ. ಇದನ್ನೂ ಓದಿ: ಮೈಲಿಗೆ ಅಂತ ಬಾಣಂತಿ, ಮಗುವನ್ನು ಊರ ಹೊರಗಿಟ್ಟ ಪ್ರಕರಣ – ವಿಪರೀತ ಶೀತದಿಂದ ಮಗು ಸಾವು
Advertisement
Advertisement
ತಮ್ಮೂರಿಗೆ ಹೋಗಲು ವಿದ್ಯಾರ್ಥಿನಿಯರು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದರು. ವರನಾಳ ಗ್ರಾಮಕ್ಕೆ ಹೋಗುವ ವಿದ್ಯಾರ್ಥಿಗಳನ್ನ ಹತ್ತಿಸಿಕೊಂಡಿರಿ. ನಾವು ಓಕಳಿ ವರೆಗೆ ಬರ್ತೀವಿ ಎಂದ ವಿದ್ಯಾರ್ಥಿನಿಯರು ಚಾಲಕನ ಬಳಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ‘ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ’ ಎಂದಿದ್ದಾನೆ ಚಾಲಕ.
Advertisement
Advertisement
ಏಕವಚನದಲ್ಲಿ ಬೈಯ್ದು ನಮ್ಮನ್ನ ಚಾಲಕ ಕೆಳಗಿಳಿಸಿದ್ದಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ವಿಚಾರವಾಗಿ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಬದುಕಿದ್ದವನ ಹೆಸರಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ 35 ಎಕರೆಗೆ ಸ್ಕೆಚ್ – ಐವರು ಅರೆಸ್ಟ್
Web Stories