ಹುಬ್ಬಳ್ಳಿ: ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಕೆರೆ ಪಕ್ಕದ ರಸ್ತೆ ಕುಸಿದಿದ್ದರಿಂದ ಬಸ್ ಪಲ್ಟಿ ಆಗುವ ಸಾಧ್ಯತೆ ಇತ್ತು. ಆದರೆ ಚಾಲಕ ನಾರಾಯಣ ಅವರ ಸಮಯ ಪ್ರಜ್ಞೆಯಿಂದ ಬಸ್ ನಿಯಂತ್ರಿಸಿ ಸಾಹಸ ಮೆರೆದಿದ್ದು, ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಸಾರಿಗೆ ಬಸ್ ಗಿರಿಯಾಲದಿಂದ ಬೆಳಗ್ಗೆ ಚನ್ನಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತಿತ್ತು. ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಕುಸಿದಿದ್ದು, ಚಾಲಕ ಬೃಹದಾಕಾರದ ತೆಗ್ಗಿನಲ್ಲಿ ಬೀಳುತ್ತಿದ್ದ ಬಸ್ ಅನ್ನು ನಿಯಂತ್ರಿಸಿದ್ದಾರೆ.
ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದಿದ್ದಾರೆ. ಅಲ್ಲದೆ ಚಾಲಕನ ಸಮಯಪ್ರಜ್ಞೆ ಕಂಡು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.