ಚಿಕ್ಕಬಳ್ಳಾಪುರ: ಖಾಸಗಿ ಬಸ್‍ನಲ್ಲಿ ಕ್ಲೀನರ್ ಆಗಿದ್ದವ, ಮುಂದೆ ಅದೇ ಬಸ್‍ನ ಚಾಲಕನಾಗಬೇಕು ಎಂಬ ಆಸೆ ಹೊಂದಿದ್ದನು. ಆದರೆ ಆತನ ಜೀವನದಲ್ಲಿ ನಡೆದ ಒಂದು ಘಟನೆ ಆತನ ಜೀವನ ದಿಕ್ಕನ್ನೆ ಬದಲಾಯಿಸಿ ಬಿಟ್ಟಿದೆ.
Advertisement
ನಡೆದಿದ್ದೇನು?: ಮಂಜುನಾಥ್ ಖಾಸಗಿ ಬಸ್‍ನಲ್ಲಿ ಕ್ಲೀನರ್ ಆಗಿದ್ದನು. ಮುಂದೆ ಅದೇ ಬಸ್‍ನ ಚಾಲಕನಾಗಬೇಕು ಎಂದು ಕನಸು ಕಂಡಿದ್ದನು. ಆದರೆ ಅಪಘಾತವೊಂದರಲ್ಲಿ ಗಾಯಗೊಂಡು ಮಾನಸಿಕ ಅಸ್ವಸ್ಥತೆಗೆ ತುತ್ತಾದನು. ಈಗ ಯುವಕ ಈಗಲೂ ತಾನು ಬಸ್ ಚಾಲಕ ಎಂಬಂತೆ ಪ್ರತಿದಿನ ಬಸ್‍ನ ಸ್ಟೇರಿಂಗ್, ವ್ಹೀಲ್‍ಗೆ ಪೂಜೆ ಪುನಸ್ಕಾರ ಮಾಡಿ ಪ್ರತಿ ದಿನ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ವಿಚಿತ್ರವಾಗಿ ವರ್ತನೆ ಮಾಡುತ್ತಾ ಬಸ್ ಚಾಲನೆ ಮಾಡುವವನಂತೆ ಒಡಾಡುತ್ತಿದ್ದಾನೆ.
Advertisement
Advertisement
ಮೇಲ್ನೋಟಕ್ಕೆ ನೋಡಲು ಆರೋಗ್ಯವಾಗಿರೋ ಯುವಕ ಪ್ರತಿ ದಿನ ಖಾಕಿ ಶರ್ಟ್ ಧರಿಸಿ, ಬೆಳಿಗ್ಗೆ ಹೂ ಇಟ್ಟು ಪೂಜೆ ಮಾಡಿ ಬಸ್ ಚಾಲನೆ ಮಾಡೋವನ ತರ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿರುತ್ತಾನೆ. ಬಸ್‍ನ ಸ್ಟೇರಿಂಗ್ ವ್ಹೀಲ್‍ಗೆ ಮಿರರ್ ಹಾಗೂ ಹಾರ್ನ್ ಸಹ ಆಳವಡಿಕೆ ಮಾಡಿಕೊಂಡಿದ್ದಾನೆ. ಮಿರರ್ ಮೇಲೆ ಚಿಂತಾಮಣಿ-ಮುರಗಮಲ್ಲ-ಬೆಂಗಳೂರು ಮಾರ್ಗದ ಜಿ.ಆರ್ ಟ್ರಾವೆಲ್ಸ್ ಬಸ್ ಎಂದು ಹೆಸರು ಹಾಕಿಸಿಕೊಂಡಿದ್ದಾನೆ.
Advertisement
ಮುರಗಮಲ್ಲ ಕಡೆಯಿಂದ ಚಿಂತಾಮಣಿ ನಗರದ ಕಡೆಗೆ, ಕಾಲ್ನಡಿಗೆಯಲ್ಲಿ ಕೈಯಲ್ಲಿ ಸ್ಟೇರಿಂಗ್ ವ್ಹೀಲ್ ಹಿಡಿದು ಬಸ್ ಚಾಲನೆ ಮಾಡುವವನಂತೆ ನಟನೆ ಮಾಡುತ್ತಾನೆ. ಗೇರ್ ಬದಲಾಯಿಸೋದು, ನಿಲ್ದಾಣಗಳ ಬಳಿ ಬಂದು ಬ್ರೇಕ್ ಹಾಕಿ ಬಸ್ ನಿಲ್ಲಿಸೋದು, ಪ್ರಯಾಣಿಕರನ್ನ ಹತ್ತಿಸಿಕೊಳ್ಳುವಂತೆ ನಟನೆ ಮಾಡ್ತಾನೆ. ಚಿಂತಾಮಣಿ ನಗರದ ಪ್ರಮುಖ ರಸ್ತೆಗಳಲ್ಲಿ ಈ ಯುವಕ ವಿಚಿತ್ರವಾಗಿ ಒಡಾಡುತ್ತಾ ಜನರ ಗಮನ ಸೆಳೆಯುತ್ತಿದ್ದಾನೆ. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ