ರಾಯಚೂರು: ನಿಲ್ದಾಣವಿಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸುವಂತೆ ಗಲಾಟೆ ಮಾಡಿ ಶಿಕ್ಷಕಿಯೊಬ್ಬಳು ಚಾಲಕನಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಪಾಮನಕಲ್ಲೂರಿನಲ್ಲಿ ನಡೆದಿದೆ.
ಪಾಮನಕಲ್ಲೂರ ಪ್ರೌಢ ಶಾಲೆಯ ಶಿಕ್ಷಕಿ ಬಸಮ್ಮ, ಚಾಲಕ ಚನ್ನಪ್ಪನ ಮೇಲೆ ಹಲ್ಲೆ ಮಾಡಿದ್ದಾಳೆ. ಚಾಲಕ ಸ್ಟಾಪ್ ಬಂತು ಕೆಳಗೆ ಇಳಿರಿ ಎಂದಿದ್ದಾರೆ. ಅದಕ್ಕೆ ಶಿಕ್ಷಕಿ ಶಾಲೆಯ ಮುಂದೆಯೇ ಬಸ್ ನಿಲ್ಲಿಸುವಂತೆ ಕಿರಿಕಿರಿ ಮಾಡಿದ್ದಾಳೆ. ಬಳಿಕ ಚಾಲಕ ಶಾಲೆಯ ಮುಂದೆಯೇ ಬಸ್ ನಿಲ್ಲಿಸಿದ್ದಾರೆ. ಆದರೂ ಶಿಕ್ಷಕಿ ಗಲಾಟೆ ಮಾಡಿದ್ದಾಳೆ.
Advertisement
ಲಿಂಗಸುಗೂರ ನಿಂದ ಕರ್ನೂಲ್ ಗೆ ಹೋಗುವ ಮಾರ್ಗದ ಎಕ್ಸಪ್ರೆಸ್ ಬಸ್ ನಲ್ಲಿ ಶಿಕ್ಷಕಿ ಕಿರಿಕಿರಿ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರಿಂದ ಚಾಲಕ ಸಹ ಬೈದಿದ್ದಾನೆ. ನಂತರ ಜಗಳ ವಿಕೋಪಕ್ಕೆ ಹೋಗಿ ಶಿಕ್ಷಕಿ ಚಪ್ಪಲಿಯಿಂದ ಚಾಲಕನಿಗೆ ಹೊಡೆದಿದ್ದಾಳೆ. ಬಸಮ್ಮಳ ದರ್ಪಕ್ಕೆ ಸಹ ಪ್ರಯಾಣಿಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಈ ಘಟನೆ ಹಿನ್ನೆಲೆಯಲ್ಲಿ ಕವಿತಾಳ ಪೊಲೀಸ್ ಠಾಣೆಯಲ್ಲಿ ಬಸ್ಸಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement