ಯಾದಗಿರಿ: ಬಸ್‍ನಲ್ಲಿ ತನ್ನ ಮಾಲೀಕನ ಜೊತೆಗೆ ಪ್ರಯಾಣ ಮಾಡುತ್ತಿದ್ದ ಮೇಕೆ ಮರಿಗಳಿಗೆ ಕೂಡ ಬಸ್ ಕಂಡಕ್ಟರ್ ಫುಲ್ ಟಿಕೆಟ್ ನೀಡಿ ಅಚ್ಚರಿಗೊಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನಡೆದಿದೆ.
Advertisement
ರೈತರಾಗಿರುವ ಸುನೀಲ್ ಹಾಗೂ ರಾಮಲಿಂಗ ತಮ್ಮ ಮೇಕೆ ಮರಿಗಳನ್ನು ಯಾದಗಿರಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮಕ್ಕೆ ಬಸ್ ನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಬಸ್ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿ ಮೇಕೆ ಮಾಲೀಕರಿಗೆ ದಂಗು ಬಡಿಸಿದ್ದಾರೆ. ಇದನ್ನೂ ಓದಿ: KSRTC ಬಸ್‍ನಲ್ಲಿ ಕೋಳಿ ಪ್ರಯಾಣ- ಟಿಕೆಟ್ ಕೊಟ್ಟ ನಿರ್ವಾಹಕ
Advertisement
Advertisement
ಕಂಡಕ್ಟರ್ ಬಳಿ ಮೇಕೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿರು. ಆದರೆ ಇದಕ್ಕೆ ಕಂಡಕ್ಟರ್ ಒಪ್ಪದೆ ಇದ್ದಾಗ ಬೇರೆ ವಿಧಿ ಇಲ್ಲದೆ ಇಬ್ಬರೂ ರೈತರು ತಮ್ಮ ಮೇಕೆಗಳಿಗೆ ಫುಲ್ ಟಿಕೆಟ್ ದರ ನೀಡಿ ತಮ್ಮ ಜೊತೆಗೆ ಕರೆದುಕೊಂಡು ಕುಳಿತು ಕೊಳ್ಳಬೇಕಾಯಿತು. KSRTC ಬಸ್‍ನಲ್ಲಿ ಸಾಕು ಪ್ರಾಣಿ ಪಕ್ಷಿಗಳನ್ನ ಕರೆದೊಯ್ಯ ಬೇಕಾದರೆ ಪ್ರಯಾಣಿಕರಂತೆ ಪ್ರಾಣಿಗಳಿಗೂ ಟಿಕೆಟ್ ಪಡೆಯಲೇಬೇಕು ಎಂಬ ನಿಯಮವಿದೆ. ಇದನ್ನೂ ಓದಿ: ಬಸ್‍ಗೆ ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಕಂಡಕ್ಟರ್‌ನಿಂದ ಬಿತ್ತು ಬೂಟಿನೇಟು
Advertisement