ರಾಮನಗರ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ (Bengaluru-Mysuru Expressway) ವೇಯಲ್ಲಿ ಫ್ಲೈವುಡ್ (Flywood) ತುಂಬಿದ ಬೊಲೆರೋ (Bolero) ವಾಹನಕ್ಕೆ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದಿದೆ. ಅಫಘಾತದ ಪರಿಣಾಮ ಬಸ್ ಕಂಡಕ್ಟರ್ (Conductor) ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ (Electric Bus) ರಾಮನಗರ (Ramanagara) ತಾಲೂಕಿನ ವಿಜಯಪುರ (Vijayapura) ಗ್ರಾಮದ ಬಳಿ ಫ್ಲೈವುಡ್ ತುಂಬಿದ್ದ ಬೊಲೆರೋ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಸ್ ಸರ್ವಿಸ್ ರಸ್ತೆ ಪಕ್ಕದ ಜಮೀನಿಗೆ ಬಂದು ನಿಂತಿದೆ. ಘಟನೆಯ ಪರಿಣಾಮ ಬಸ್ ಕಂಡಕ್ಟರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಓವರ್‌ಟೇಕ್ ಅಲ್ಲ, ಬೊಲೆರೋ ಟಯರ್ ಸ್ಫೋಟದಿಂದ Expressway ಅಪಘಾತ – KSRTC ಸ್ಪಷ್ಟನೆ
ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐಸ್‌ಕ್ರೀಮ್ ಕಂಟೇನರ್ ಪಲ್ಟಿ – ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು
Web Stories