ಬೆಳಗಾವಿ: ಟಿಕೆಟ್ ಕೊಡುವಾಗ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಸುಳೇಬಾವಿ ಬಾಳೇಕುಂದ್ರಿ ಗ್ರಾಮದ ಬಳಿ ನಡೆದಿದೆ.
ಬಸ್ ಕಂಡಕ್ಟರ್ ಮಹದೇವ್ ಮೇಲೆ ಮರಾಠಿ ಯುವಕರ ಗುಂಪಿನಿಂದ ಹಲ್ಲೆ ನಡೆದಿದೆ. ಬಸ್‌ನಲ್ಲಿದ್ದ ಯುವತಿ, ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಹೇಳಿದ್ದಾಳೆ. ಯುವತಿಯೊಂದಿಗೆ ಯುವಕನೊಬ್ಬ ಪ್ರಯಾಣ ಮಾಡುತ್ತಿದ್ದರಿಂದ ಎರಡು ಟಿಕೆಟ್ ಕೇಳಿದ್ದಾಳೆ. ಮರಾಠಿ ಬರುವುದಿಲ್ಲ ನನಗೆ ಕನ್ನಡದಲ್ಲಿ ಹೇಳುವಂತೆ ಕಂಡಕ್ಟರ್ ಹೇಳಿದ್ದಾನೆ. ಇಷ್ಟಕ್ಕೆ ಜನರನ್ನ ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಹಲ್ಲೆ ಮಾಡಿಸಿದ್ದಾರೆ.
Advertisement
ಹಲ್ಲೆಗೆ ಒಳಗಾದ ಕಂಡಕ್ಟರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಹಲ್ಲೆಗೊಳಗಾದ ಕಂಡಕ್ಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.