ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಭೀಕರ ಮಾನ್ಸೂನ್ ಪ್ರವಾಹದಿಂದ (Flood) ಮನೆಗಳನ್ನು ತೊರೆದಿದ್ದ ಜನರು ವಾಪಸ್ ಮನೆಗೆ ತೆರಳಲು ಬಸ್‌ನಲ್ಲಿ (Bus) ಹೋಗುತ್ತಿದ್ದಾಗ ಆ ಬಸ್‌ಗೆ ಬೆಂಕಿ (Fire) ತಗುಲಿದೆ. ಪರಿಣಾಮ 12 ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿರುವುದಾಗಿ ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಈ ವರ್ಷ ಭಾರೀ ಮಳೆ ಉಂಟಾಗಿ ರಾಷ್ಟ್ರದ ಮೂರನೇ ಒಂದು ಭಾಗದಷ್ಟು ನೀರಿನಲ್ಲಿ ಮುಳುಗಿ ಹೋಗಿದೆ. ಸುಮಾರು 80 ಲಕ್ಷ ಜನರನ್ನು ಪ್ರವಾಹದಿಂದ ರಕ್ಷಿಸಲು ಸ್ಥಳಾಂತರಗೊಳಿಸಲಾಗಿದೆ. ಪ್ರವಾಹಕ್ಕೆ ಸಿಲುಕಿ ಸುಮಾರು 1,600 ಜನರು ಸಾವನ್ನಪ್ಪಿದ್ದಾರೆ.
Advertisement
Advertisement
ಇದೀಗ ಪ್ರವಾಹದ ನೀರು ನಿಧಾನವಾಗಿ ಇಳಿಮುಖವಾಗುತ್ತಿದ್ದು, ಸ್ಥಳಾಂತರಗೊಂಡ ಸಾವಿರಾರು ಜನರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಹೀಗೆ ಪ್ರವಾಹ ಸಂತ್ರಸ್ತರ (Flood Victims) ತಂಡ ತಮ್ಮ ಮನೆಗಳಿಗೆ ಸಾಗುವ ವೇಳೆ ತಾವಿದ್ದ ಬಸ್‌ಗೆ ಬೆಂಕಿ ತಗುಲಿ ಈ ದುರ್ಘಟನೆ ನಡೆದಿದೆ. ಬಸ್ ಕರಾಚಿಯಿಂದ ಉತ್ತರದ ಕಡೆಗೆ ತೆರಳುತ್ತಿತ್ತು. ಇದನ್ನೂ ಓದಿ: ಉಗ್ರರ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ ಸೇನಾ ಶ್ವಾನ ʼಜೂಮ್ʼ ಸಾವು
Advertisement
Advertisement
ಬಸ್‌ನ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಶಂಕಿಸಲಾಗಿದೆ. ಬೆಂಕಿಗೆ ನಿಜವಾದ ಕಾರಣ ತನಿಖೆಯ ಮೂಲಕವೇ ಬಹಿರಂಗಗೊಳ್ಳುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೇಟೆಗೆ ಹೋಗಿದ್ದ ನಾಲ್ವರು ಸ್ನೇಹಿತರಲ್ಲಿ ಒಬ್ಬ ನಿಗೂಢ ಸಾವು