ಕೋಲಾರ: ಕರ್ನಾಟಕದ (Karnataka) ಭಕ್ತರನ್ನು ಹೊತ್ತು ಶಬರಿಮಲೆಗೆ (Sabarimala) ತೆರಳುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ 13 ಮಂದಿ ಸೇರಿ ಒಟ್ಟು 17 ಮಂದಿ ಶಬರಿಮಲೆ ಯಾತ್ರಿಕರು (Pilgrims) ಗಾಯಗೊಂಡಿರುವ ಘಟನೆ ಕೇರಳದ (Kerala) ಅತ್ತಿವಲವುನ ಎರುಮೆಲಿನಲ್ಲಿ (Erumeli) ನಡೆದಿದೆ.
ಕೇರಳ ರಾಜ್ಯದ ಕೊಟ್ಟಾಯಂ (Kottayam) ಜಿಲ್ಲೆಯಲ್ಲಿ ಈ ಅಪಘಾತ (Accident) ಸಂಭವಿಸಿದ್ದು, ಕೋಲಾರ (Kolar) ಮೂಲದ 13 ಮಂದಿ ಸೇರಿದಂತೆ ಒಟ್ಟು 17 ಮಂದಿ ಗಾಯಗೊಂಡಿದ್ದಾರೆ. ಶಬರಿಮಲೆ ಯಾತ್ರಿಕರನ್ನು ಹೊತ್ತ ಬಸ್ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಬೆಟ್ಟದ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಪಲ್ಟಿಯಾಗಿದೆ. ಇದನ್ನೂ ಓದಿ: ಕೋರಮಂಗಲದ ಕಟ್ಟಡದಲ್ಲಿ ಬೆಂಕಿ ಅವಘಡ – ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ
Advertisement
Advertisement
ಬಸ್ಸಿನಲ್ಲಿ ಒಟ್ಟು 43 ಮಂದಿ ಯಾತ್ರಿಕರು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿದೆ. ಗಾಯಾಳುಗಳನ್ನು ಮುಳಬಾಗಿಲು ತಾಲೂಕಿನ ತಮ್ಮರೆಡ್ಡಿಹಳ್ಳಿ, ಬಂಗವಾದಿ, ಮಜರಾ ಕಿತ್ತೂರು, ಗ್ರಾಮದವರು ಎನ್ನಲಾಗಿದೆ. ಯಾತ್ರಾರ್ಥಿಗಳು ಮುಳಬಾಗಿಲಿನಿಂದ ವಿನಾಯಕ ಖಾಸಗಿ ಬಸ್‌ನಲ್ಲಿ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಗೋವಾದಿಂದ ಟ್ರಾನ್ಸ್‌ಫಾರ್ಮರ್‌ನಲ್ಲಿ ಮದ್ಯ ಸಾಗಾಟ – ಆರೋಪಿ ಅರೆಸ್ಟ್
Advertisement
Advertisement
ಗಾಯಗೊಂಡ 17 ಮಂದಿಯಲ್ಲಿ 15 ಮಂದಿಯನ್ನು ಕಂಜಿರಪ್ಪಲಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಉಳಿದ ಇಬ್ಬರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗಿದೆ. ಇದನ್ನೂ ಓದಿ: 20 ವರ್ಷಗಳ ಹಿಂದಿನ ಕೊಲೆ ಪ್ರಕರಣ – ಮೃತ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!
Web Stories