– ಆಟೋ ಚಾಲಕ, ಪ್ರಯಾಣಿಕರಿಗೂ ಗಾಯ
ಉಡುಪಿ: ಶಾಲಾ ವಾರ್ಷಿಕ ಪ್ರವಾಸದ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಉಡುಪಿಯಲ್ಲಿ ನಡೆದಿದೆ.
ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕೂಂದೂರಿನಲ್ಲಿ ಶಾಲಾ ಮಕ್ಕಳನ್ನು ಹೊತ್ತು ಸಾಗಿದ್ದ ಬಸ್, ಆಟೋ ರಿಕ್ಷಾವನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿಯಾಗಿದೆ. ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಶೈಕ್ಷಣಿಕ ಪ್ರವಾಸಕ್ಕೆ ತುಮಕೂರಿನ ಮಾರಮ್ಮ ದೇವರು ಗ್ರಾಮಾಂತರ ಶಾಲಾ ಮಕ್ಕಳನ್ನು ಕರೆತರಲಾಗಿತ್ತು.
Advertisement
Advertisement
ಬಸ್‍ನಲ್ಲಿ 60 ಕ್ಕೂ ಅಧಿಕ ಮಕ್ಕಳಿದ್ದು, ಅದರಲ್ಲಿ 15 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಪೈಕಿ ಇಬ್ಬರು ಗಾಯಾಳು ವಿದ್ಯಾರ್ಥಿಗಳನ್ನು ಮಣಿಪಾಲ ಕೆಎಂಸಿಗೆ ದಾಖಲು ಮಾಡಲಾಗಿದೆ. ಉಳಿದ ಗಾಯಾಳುಗಳಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ರಸ್ತೆ ಎಡಬದಿಯಿಂದ ಬಂದ ಆಟೋಗೆ ಶಾಲಾ ಪ್ರವಾಸದ ಬಸ್ ಗುದ್ದಿದೆ. ಅಟೋಗೆ ಡಿಕ್ಕಿಯಾಗಿ ನಂತರ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಮುಂಬದಿಯಿಂದ ಬಂದಿದ್ದ ಅಟೋ ಚಾಲಕ, ಪ್ರಯಾಣಿಕರಿಗೂ ಗಾಯಗಳಾಗಿದೆ. ಮಕ್ಕಳ ಬಸ್ ಉಡುಪಿಗೆ ಬಂದು ಶ್ರೀಕೃಷ್ಣಮಠನ ದರ್ಶನ ಮಾಡಿ ಬಳಿಕ ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ಅಪಘಾತವಾದಾಗ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡಿದ್ದಾರೆ.
ಕಾರ್ಕಳ ನಗರ ಪೊಲೀಸರು ಸ್ಥಳಕ್ಕಾಗಮಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.