ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಬಳಿ ಸರ್ಕಾರಿ ಬಸ್ಸಿನ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ಬಸ್ ರಸ್ತೆ ಬಿಟ್ಟು ಗದ್ದೆಗೆ ನುಗ್ಗಿದೆ.
ಸರ್ಕಾರಿ ಬಸ್ಸೊಂದು ಪಂಡರಾಪುರದಿಂದ ವಿಜಯಪುರ ಮಾರ್ಗವಾಗಿ ಇಂಡಿಗೆ ಹೊರಟಿತ್ತು. ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಇಂಡಿಗೆ ವಾಪಸ್ಸಾಗುತ್ತಿದ್ದರು. ಆದರೆ ಇಂಡಿ ತಾಲೂಕಿನ ಇಂಚಗೇರಿ ಬಳಿ ಬರುತ್ತಿದ್ದಂತೆ ಬಸ್ಸಿನ ಸ್ಟೇರಿಂಗ್ ರಾಡ್ ಕಟ್ ಆಗಿದೆ.
ಬಸ್ಸಿನ ಸ್ಟೇರಿಂಗ್ ರಾಡ್ ಕಟ್ ಆಗುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ನುಗ್ಗಿದೆ. ಆದರೆ ಈ ವೇಳೆ ಚಾಲಕ ಬಸ್ಸಿನ ವೇಗ ನಿಯಂತ್ರಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಚಾಲಕನ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಈ ಅವಘಡದಲ್ಲಿ ಚಾಲಕನಿಗೆ ಗಾಯವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv