ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ (Bus) ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ (Haveri) ಗುರುವಾರ ಮುಂಜಾನೆ ನಡೆದಿದೆ. ಬ್ಯಾಡಗಿ (Byadagi) ಬಳಿಯ ಮೊಟೇಬೆನ್ನೂರಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಘಟನೆ ನಡೆದಿದೆ.
ಮೃತ ಚಾಲಕನನ್ನು ಸದಾನಂದ (50) ಎಂದು ಗುರುತಿಸಲಾಗಿದೆ. ಅಲ್ಲದೇ ಓರ್ವ ಪ್ರಯಾಣಿಕ ಸಹ ಮೃತಪಟ್ಟಿದ್ದು, ಘಟನೆಯಲ್ಲಿ 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವ್ಹೀಲಿಂಗ್ ಮಾಡುತ್ತ ಯುವತಿಯರಿಗೆ ಗುದ್ದಿದ ಪುಂಡರು – ಇಬ್ಬರಿಗೆ ಗಂಭೀರ ಗಾಯ
Advertisement
Advertisement
ಖಾಸಗಿ ಬಸ್ ಬೆಂಗಳೂರಿನಿಂದ ಮೀರಜ್ಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ, ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನೈತಿಕ ಹೊಣೆ ಹೊತ್ತು ಕಟೀಲ್ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ
Advertisement
Web Stories