ಸದಾ ಒಂದಿಲ್ಲೊಂದು ಹಾಟ್ ಉಡುಗೆಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ಬಹುಭಾಷಾ ನಟಿ ಖುಷಿ ಮುಖರ್ಜಿ (Khushi Mukherjee) ಇದೀಗ ಬುರ್ಖಾ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾ ಖಾತೆಯಲ್ಲಿ ಸ್ಟೋರಿಯೊಂದನ್ನ ಹಂಚಿಕೊಂಡಿದ್ದ ನಟಿ ʻಭಾರತದಲ್ಲಿ ಬುರ್ಖಾ ಬ್ಯಾನ್ (Burqa Ban) ಆಗಬೇಕುʼ ಅಂತ ಬರೆದುಕೊಂಡಿದ್ದಾರೆ. ಆದ್ರೆ ಇದ್ದಕ್ಕಿದ್ದಂತೆ ಬುರ್ಖಾ ವಿಚಾರ ಎಳೆದು ತಂದಿದ್ದೇಕೆ ಅನ್ನೋದನ್ನ ನಟಿ ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್
ಖುಷಿ ಮುಖರ್ಜಿ ಆಗಾಗ್ಗೆ ವಿಭಿನ್ನ ಉಡುಗೆಗಳಿಂದಲೇ ತನ್ನ ಮೈಮಾಟ ಪ್ರದರ್ಶಿಸುವ ಫೋಟೋಗಳನ್ನು (Khushi Mukherjee Hot Photos) ಸೋಷಿಯಲ್ ಮೀಡಿಯಾ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಳ್ತಾರೆ. ಕೆಲವೊಮ್ಮೆ ಒಳಉಡುಪು ಕಾಣುವಂತಹ ಫೋಟೋಗಳನ್ನ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ – ಟ್ರೋಲ್‌ಗಳಿಗೆ ಖುಷಿ ಮುಖರ್ಜಿ ಉತ್ತರ
ಯಾರು ಖುಷಿ ಮುಖರ್ಜಿ?
ನಟಿಯ ಕುರಿತು ಹೇಳುವುದಾದ್ರೆ, ಖುಷಿ ಮುಖರ್ಜಿ ಬಹುಭಾಷಾ ನಟಿಯಾಗಿದ್ದು, ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ‘ಅಂಜಲಾ ತುರಾಯ್’, ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ ‘ಹಾರ್ಟ್ ಎಟಾಕ್’, ತೆಲುಗಿನಲ್ಲೇ ‘ದೊಂಗ ಪ್ರೇಮ’ ಚಿತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೂ ಬಂದಿದ್ದ ನಟಿ ಕನ್ನಡದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಪಾತ್ರಕ್ಕೆ ತಕ್ಕಂತೆ ಯಾವ ರೀತಿಯ ಡ್ರೆಸ್ ಬೇಕಾದರೂ ಧರಿಸಲು ಸಿದ್ಧ ಎಂದಿದ್ದರು… ಈ ಮುಂಬೈ ಬೆಡಗಿ. ಇತ್ತೀಚೆಗೆ ಖುಷಿ ನಟಿಸಿರುವ ವೆಬ್ ಸರಣಿ ಓಟಿಟಿಯಲ್ಲಿ ತೆರೆ ಕಂಡಿದ್ದು, ಪಡ್ಡೆಗಳ ನಿದ್ದೆಗೆಡಿಸಿದೆ. ಇದನ್ನೂ ಓದಿ: ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್ ಉತ್ತರ



