ವಿಡಿಯೋ: ಬೆಂಕಿ ಹೊತ್ತಿಕೊಂಡಿದ್ರೂ ಹೈವೇನಲ್ಲಿ 3 ಕಿ.ಮೀ ಚಲಿಸಿದ ಟ್ರಕ್

Public TV
1 Min Read
truck fire 2

ಬೀಜಿಂಗ್: ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದರೂ ಟ್ರಕ್‍ವೊಂದು 3 ಕಿಲೋಮೀಟರ್ ದೂರ ಹೈವೇಯಲ್ಲಿ ಚಲಿಸಿ ನೋಡುಗರನ್ನು ಬೆಚ್ಚಿಬೀಳಿಸಿದ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಸೆಪ್ಟೆಂಬರ್ 16ರಂದು ಈ ಘಟನೆ ನಡೆದಿರುವುದಾಗಿ ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಇಲ್ಲಿನ ಚಾಂಗ್‍ಚುನ್- ಶೆನ್‍ಝೆನ್ ರಸ್ತೆಯಲ್ಲಿ ಸಿಮೆಂಟ್ ಟ್ಯಾಂಕ್ ಲಾರಿಯ ಟೈರ್‍ಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹೊತ್ತಿಕೊಂಡಿರುವುದು ಗೊತ್ತಿದ್ದರೂ ಚಾಲಕ ಟ್ರಕ್ ನಿಲ್ಲಿಸದೆ ಮುಂದೆ ಸಾಗಿದ್ದರು.

truck fire 1

ಆದ್ರೆ ಇದರಿಂದ ರಸ್ತೆಗೆ ಹಾನಿಯಾಗುತ್ತದೆ ಎಂಬ ಭಯದಿಂದ ಟೋಲ್ ಸ್ಟೇಷನ್‍ವೊಂದರ ಬಳಿ ಸಹಾಯ ಕೇಳಿದ್ರು. ಆಗ ಟೋಲ್ ಸಿಬ್ಬಂದಿ ನೆರವಿಗೆ ಬಂದು ಟ್ರಕ್‍ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನ ನಂದಿಸಿದ್ದಾರೆ.

truck fire

ಇಲ್ಲಿನ ಮಾಧ್ಯಮ ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ನೋಡುಗರನ್ನ ಬೆಚ್ಚಿಬೀಳಿಸುವಂತಿದೆ.

https://www.facebook.com/PeoplesDaily/videos/1670751779643299/

 

Share This Article
Leave a Comment

Leave a Reply

Your email address will not be published. Required fields are marked *