ಭೋಪಾಲ್: ಮನೆಯಲ್ಲಿ ಹಣವವಿಲ್ಲದಿದ್ದರೆ ಮನೆ ಬಾಗಿಲು ಲಾಕ್ ಮಾಡಿ ಹೋಗುವ ಅವಶ್ಯಕತೆ ಏನಿತ್ತು ಎಂದು ಕಳ್ಳರು ಮನೆ ಮಾಲೀಕನಿಗೆ ಪಶ್ನಿಸಿ ಪತ್ರ ಬರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪತ್ರದಲ್ಲಿ ಏನಿದೆ?
ಹಣವೇ ಇಲ್ಲದಿರುವಾಗ ಮನೆಯನ್ನು ಲಾಕ್ ಮಾಡುವ ಅಗತ್ಯವೇನಿತ್ತು? (ಜಬ್‍ಪೈಸೆ ನಹೀ ತೇ ತೋ ಲಾಕ್ ನಹಿ ಕರ್ನಾ ಥಾ ನಾ) ಎಂದು ಬರೆಯಲಾಗಿದೆ. ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ: ಎಚ್‍ಡಿಕೆ
Advertisement
In a strange incident of theft in Dewas, burglars not only broke into the house of a deputy collector but also left a note for him. “Jab paise nahi they toh lock nahi karna tha na collector! pic.twitter.com/mafaLj4gPC
— Anurag Dwary (@Anurag_Dwary) October 10, 2021
Advertisement
ಹಿನ್ನೆಲೆ ಏನು:
ಭೋಪಾಲ್‍ನಿಂದ ಸ್ವಲ್ಪ ದೂರದಲ್ಲಿ ದೇವಾಸ್‍ನ ಸಿವಿಲ್ ಲೈನ್ ಪ್ರದೇಶದಲ್ಲಿ ಮಧ್ಯಪ್ರದೇಶದ ಉಪ ಜಿಲ್ಲಾಧಿಕಾರಿ ತ್ರಿಲೋಚನ್ ಗೌರ್ ಅವರ ಮನನೆ ಇದೆ. ಖಟೇಗಾಂವ್ ತಹಸಿಲ್‍ನಲ್ಲಿ (ಎಸ್‍ಡಿಎಮ್) ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಗೊಂಡಿರುವ ತ್ರಿಲೋಚನ್ ಗೌರ್ ಕಳೆದ 20 ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರು ಮನೆಗೆ ನುಗ್ಗಿದ್ದಾರೆ. ದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್
Advertisement
Advertisement
ತ್ರಿಲೋಚನ್ ಅವರು ಮರಳಿ ಮನೆಗೆ ಬಂದಾಗ ಮನೆಯಲ್ಲಿ ಇರುವ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದವು, ಹಣ, ಚಿನ್ನಾಭರಣಗಳು ಕಳುವಾಗಿದ್ದವು. ತಕ್ಷಣ ಪೊಲೀಸರಲ್ಲಿ ದೂರು ನೀಡಿದ್ದಾರೆ. 30,000 ನಗದು ಮತ್ತು ಕೆಲವು ಆಭರಣಗಳನ್ನು ತ್ರಿಲೋಚನ್ ಗೌರ್ ಅವರ ಸರ್ಕಾರಿ ನಿವಾಸದಿಂದ ಕಳವು ಮಾಡಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಇನ್ಸ್‌ಪೆಕ್ಟರ್ ಉಮ್ರಾವ್ ಸಿಂಗ್ ಹೇಳಿದ್ದಾರೆ.