DistrictsKarnatakaLatestMain PostRaichur

RTPSನಲ್ಲಿ ಕಳಚಿಬಿದ್ದ ಬಂಕರ್‌ಗಳು – ವಿದ್ಯುತ್ ಉತ್ಪಾದನೆ ಸ್ಥಗಿತ

ರಾಯಚೂರು: ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ RTPSನಲ್ಲಿ ಅವಘಡ ನಡೆದಿದ್ದು, ಕೋಟ್ಯಾಂತರ ರೂಪಾಯಿ ಹಾನಿ ಸಂಭವಿಸಿದೆ.

ವಿದ್ಯುತ್ ಕೇಂದ್ರದ ಒಂದನೇ ಘಟಕದಲ್ಲಿ ಕಲ್ಲಿದ್ದಲು ಸಂಗ್ರಹಗೊಂಡಿದ್ದ ಮೂರು ಬಂಕರ್‌ಗಳು ಕಳಚಿ ಬಿದ್ದಿವೆ. ಘಟನೆಯಿಂದ ವಿದ್ಯುತ್ ಉತ್ಪಾದನೆ ಅಸಾಧ್ಯವಾಗಿದ್ದು, ಜೊತೆಗೆ ಕೋಟ್ಯಾಂತರ ರೂಪಾಯಿ ಹಾನಿ ಸಂಭವಿಸಿದೆ. ಸುಮಾರು ದಿನಗಳಿಂದ ಕಲ್ಲಿದ್ದಲು ಸಾಗಿಸದೆ ಸಂಗ್ರಹಿಸಿಟ್ಟ ಪರಿಣಾಮ ಘಟನೆ ನಡೆದಿದೆ. ಕಲ್ಲಿದ್ದಲು ಭಾರ ಹೆಚ್ಚಾಗಿದ್ದರಿಂದ ಬಂಕರ್‌ಗಳು ಕಳಚಿ ಬಿದ್ದಿವೆ. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು: ಅಶ್ವಥ್ ನಾರಾಯಣ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

ಬಾಯ್ಲರ್ ಬಳಿ ಘಟನೆ ನಡೆದಿದ್ದು, ನೀರಿನ ಮಾರ್ಗ ಹಾಳಾಗಿ ನೀರು ಪೋಲಾಗಿದೆ. ಬಂಕರ್‌ಗಳಿಂದ ಮಿಲ್ ಮೂಲಕ ರವಾನಿಸಬೇಕಿದ್ದ ಕಲ್ಲಿದ್ದಲು ಲೋಡ್ ಹೆಚ್ಚಾಗಿ ಕುಸಿತವಾಗಿದೆ. ಕಳಚಿ ಬಿದ್ದ ಬಂಕರ್‌ಗಳ ಪುನರ್ ಜೋಡಣೆಗೆ ತಿಂಗಳುಗಟ್ಟಲೆ ಸಮಯ ಬೇಕಿದೆ.

ವ್ಯವಸ್ಥೆ ಸರಿಪಡಿಸುವವರೆಗೂ ಒಂದನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ. RTPS ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಅವಘಡ ನಡೆದಿದೆ. ಇದನ್ನೂ ಓದಿ:  ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಮುಗಿಸಲು ಪ್ರಯತ್ನಿಸುತ್ತಿದೆ, ನಿತೀಶ್‍ರದ್ದು ಒಳ್ಳೆಯ ನಿರ್ಧಾರ: ಶರದ್ ಪವಾರ್

Live Tv

Leave a Reply

Your email address will not be published.

Back to top button