ಬೆಂಗಳೂರು: ಬಿಡಿಎ ಬ್ರೋಕರ್‍ವೊಬ್ಬರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಗೆ ಕಂತೆ ಕಂತೆ ನೋಟುಗಳು ಹಾಗೂ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನ ಇಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಬಿಡಿಎ ಬ್ರೋಕರ್ ಸುರೇಶ್ ಅಲಿಯಾಸ್ ಸೂರಿ ಮನೆಯಲ್ಲಿ ಗರಿಗರಿ ನೋಟುಗಳ ಕಂತೆ ಮೇಲೆ ಲಕ್ಷ್ಮೀ ವಿಗ್ರಹವಿಟ್ಟು ಪೂಜೆ ಮಾಡಲಾಗಿದೆ. ಸೂರಿ ಎಚ್‍ಎಸ್‍ಆರ್ ಲೇಔಟ್ ಬಿಡಿಎ ವಿಭಾಗದಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದು, ಇವರಿಗೆ ಕಾರ್ನರ್ ಕಟ್ಟಿಂಗ್ ಸೂರಿ ಎನ್ನುವ ಅಡ್ಡ ಹೆಸರಿದೆ. ಇದೀಗ ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ಪೂಜೆಗೆ ಸಾಲಾಗಿ ಜೋಡಿಸಿರುವ ಹಣದ ಮುಂದೆ ರಾಜಾರೋಷವಾಗಿ ಫೋಸ್ ಕೊಟ್ಟು ಪೀಕಲಾಟಕ್ಕೆ ಸಿಲುಕಿದಂತಾಗಿದೆ.
Advertisement
Advertisement
ಕಾರ್ನರ್ ಕಟಿಂಗ್ ಸೈಟ್, ಬದಲಿ ಸೈಟ್ ಹೆಸರಿನಲ್ಲಿ ಸೂರಿ ಕೋಟ್ಯಾಂತರ ರುಪಾಯಿ ಹಣ ಗಳಿಕೆ ಮಾಡಿದ್ದಾರೆ ಎನ್ನುವ ಆರೋಪ ಈಗ ಬಲವಾಗಿ ಕೇಳಿಬಂದಿದೆ. ಪಾರ್ಕ್ ಗೆ ಅಂತ ಮೀಸಲಿಟ್ಟಿದ್ದ ಜಾಗದಲ್ಲಿ ನಕಲಿ ಪತ್ರ ಸೃಷ್ಟಿಸಿ ಸೈಟ್‍ಗಳಾಗಿ ಕನ್ವರ್ಟ್ ಮಾಡಿ ಮಾರಿದ್ದ ಆರೋಪ ಇವರ ಮೇಲಿದೆ.
Advertisement