Connect with us

Cricket

ನೆಹ್ರಾ, ಜಡೇಜಾ, ಇರ್ಫಾನ್, ಯುವರಾಜ್ ಸಿಂಗ್ ಹಿಂದಿಕ್ಕಿ ಬೂಮ್ರಾ ದಾಖಲೆ!

Published

on

Share this

ಬೆಂಗಳೂರು: ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಬೂಮ್ರಾ ಆಶಿಷ್ ನೆಹ್ರಾ, ರವೀಂದ್ರ ಜಡೇಜಾ, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಸದ್ಯ ಸ್ಪಿನ್ನರ್ ಆರ್.ಅಶ್ವಿನ್ ಹೆಸರಲ್ಲಿದೆ. ಇದುವರೆಗೆ 52 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ ಅಶ್ವಿನ್.

ಟಾಪ್ 5 ಬೌಲರ್: ಆರ್.ಅಶ್ವಿನ್ – 52 ವಿಕೆಟ್, ಜಸ್ಪ್ರೀತ್ ಬೂಮ್ರಾ – 36 ವಿಕೆಟ್, ಆಶಿಷ್ ನೆಹ್ರಾ – 34, ರವೀಂದ್ರ ಜಡೇಜಾ 31, ಇರ್ಫಾನ್ ಪಠಾಣ್ ಮತ್ತು ಯುವರಾಜ್ ಸಿಂಗ್ ತಲಾ 28 ವಿಕೆಟ್ ಪಡೆದು ಮೊದಲ ಐದು ಸ್ಥಾನದಲ್ಲಿದ್ದಾರೆ.

ರಾಂಚಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಬೂಮ್ರಾ ಈ ದಾಖಲೆ ಮಾಡಿದ್ದಾರೆ. ಈ ಪಂದ್ಯದಲ್ಲಿ 3 ಓವರ್ ನಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಇದುವರೆಗೆ ಬೂಮ್ರಾ ಒಟ್ಟು 26 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದು 36 ವಿಕೆಟ್ ಪಡೆದಿದ್ದಾರೆ. ಆಸೀಸ್ ವಿರುದ್ಧ 5 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ ಬೂಮ್ರಾ.

Click to comment

Leave a Reply

Your email address will not be published. Required fields are marked *

Advertisement