ತಿರುವನಂತಪುರ: ನ್ಯೂಜಿಲೆಂಡ್ ವಿರುದ್ಧದ ಕೊನೆಯ ಹಾಗೂ ನಿರ್ಣಾಯಕ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಸಿದ್ದು ಟೀಂ ಇಂಡಿಯಾದ ಸಾಂಘಿಕ ಹೋರಾಟ. ಸಿಕ್ಕಿದ ಯಾವ ಅವಕಾಶವನ್ನೂ ಕೈಚೆಲ್ಲದ ಟೀಂ ಇಂಡಿಯಾ ಆಟಗಾರರು ಟಿ20 ಕಪ್ ತಮ್ಮ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಅದರಲ್ಲೂ ಮುಖ್ಯವಾಗಿ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಸ್ಪಿನ್ನರ್ ಚಾಹಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ಮೇಲಿಟ್ಟ ವಿಶ್ವಾಸವನ್ನು ಹುಸಿಗೊಳಿಸಲಿಲ್ಲ. 8 ಓವರ್ ಗಳ ಈ ಪಂದ್ಯದಲ್ಲಿ ಬೂಮ್ರಾ ಹಾಗೂ ಚಾಹಲ್ 4 ಓವರ್ ಗಳನ್ನು ಎಸೆದರು. 4 ಓವರ್‍ಗಳಲ್ಲಿ ಇಬ್ಬರೂ ಸೇರಿ ಕೇವಲ 17 ರನ್ ಮಾತ್ರ ಬಿಟ್ಟು ಕೊಟ್ಟು 2 ಮಹತ್ವದ ವಿಕೆಟ್ ಗಳನ್ನು ಕಬಳಿಸಿದರು. ಇದರಲ್ಲಿ ಬೂಮ್ರಾ 2 ಓವರ್ ನಲ್ಲಿ 9 ರನ್ ಗೆ 2 ವಿಕೆಟ್ ಪಡೆದರೆ, ಚಹಲ್ 2 ಓವರ್ ಗಳಲ್ಲಿ ಕೇವಲ 8 ರನ್ ಮಾತ್ರ ಬಿಟ್ಟು ಕೊಟ್ಟರು. 2 ಓವರ್ ನಲ್ಲಿ 2 ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
Advertisement
ಕೊನೆಯ ಆ ಓವರ್: ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಓವರ್ ನಲ್ಲಿ 19 ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ 1 ರನ್ ಬಂದರೆ 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸುವುದು ಸಾಧ್ಯವಾಗಲಿಲ್ಲ. ಆದರೆ ಈ ವೇಳೆ ಬಾಲ್ ಪಾಂಡ್ಯಾ ಎಡಕೈಗೆ ತಗುಲಿತ್ತು. ತಕ್ಷಣ ಟೀಂ ಫಿಸಿಯೋ ಬಂದು ನೋವು ನಿವಾರಕ ಸ್ಪ್ರೇ ಹಾಕಿದರು. ಬಳಿಕ ಬೌಲಿಂಗ್ ಆರಂಭಿಸಿದ ಪಾಂಡ್ಯ 3ನೇ ಎಸೆತದಲ್ಲಿ ಗ್ರಾಂಡ್ ಹೋಮ್ ಸಿಕ್ಸರ್ ಬಾರಿಸಿದಾದ ಸ್ಟೇಡಿಯಂನಲ್ಲಿ ನೀರವ ಮೌನ. ನಂತರದ ಬಾಲ್ ನಲ್ಲಿ ಪಾಂಡ್ಯಾ ವೈಡ್ ಎಸೆದರು. 4ನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಂತು. 5 ನೇ ಎಸೆತದಲ್ಲಿ 2 ರನ್ ಬಂದಿತ್ತು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಯಾಕೆಂದರೆ ಬಾಕಿ ಉಳಿದಿದ್ದ 1 ಎಸೆತದಲ್ಲಿ 8 ರನ್ ಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರರು ಕೇವಲ 1 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೀಂ ಇಂಡಿಯಾ 6 ರನ್ ಗಳ ಗೆಲುವು ಸಾಧಿಸಿತ್ತು.
Advertisement
Advertisement
Advertisement