ಲಂಡನ್: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕರುಣಾರತ್ನೆ ಅವರ ವಿಕೆಟ್ ಪಡೆಯುವ ಮೂಲಕ ಬುಮ್ರಾ ಟೀಂ ಇಂಡಿಯಾ ಪರ ವೇಗವಾಗಿ 100 ವಿಕೆಟ್ ಪಡೆದ ಶಮಿ ಜೊತೆ ಗುರುತಿಸಿಕೊಂಡರು.
Advertisement
ಪಂದ್ಯದಲ್ಲಿ ಸತತ 9 ಡಾಟ್ ಬಾಲ್‍ಗಳನ್ನು ಬೌಲ್ ಮಾಡಿದ ಬುಮ್ರಾ ಇನ್ನಿಂಗ್ಸ್ ನ 4ನೇ ಓವರಿನಲ್ಲಿ ಕರುಣಾರತ್ನೆ ಧೋನಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂದ್ಯದಲ್ಲಿ ಕುಶಾಲ್ ಪೆರೆರಾ ವಿಕೆಟ್ ಪಡೆದ ಬುಮ್ರಾ ಶ್ರೀಲಂಕಾ ತಂಡಕ್ಕೆ ಡಬಲ್ ಅಘಾತ ನೀಡಿದರು.
Advertisement
Jasprit Bumrah is on fire ????
Kusal Perera walks after getting an inside-edge through to MS Dhoni.
Sri Lanka are 40/2 in the eighth over.#CWC19 | #SLvIND pic.twitter.com/AQJWVRNNsl
— ICC Cricket World Cup (@cricketworldcup) July 6, 2019
Advertisement
57 ಪಂದ್ಯಗಳಲ್ಲಿ 100 ವಿಕೆಟ್ ಸಾಧನೆ ಮಾಡಿರುವ ಬುಮ್ರಾ ಭಾರತ ಪರ ವೇಗವಾಗಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡರು. ಈ ಹಿಂದೆ ಮೊಹಮ್ಮದ್ ಶಮಿ 56 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದರು. ಉಳಿದಂತೆ ಪಟ್ಟಿಯಲ್ಲಿ 65 ಪಂದ್ಯಗಳಿಂದ ಜಹೀರ್ ಖಾನ್, 67 ಪಂದ್ಯಗಳಿಂದ ಅಜಿತ್ ಅಗರ್ಕರ್, 98 ಪಂದ್ಯಗಳಿಂದ ಶ್ರೀನಾಥ್ ಹಾಗೂ 59 ಪಂದ್ಯಗಳಿಂದ ಇರ್ಫಾನ್ ಪಠಾಣ್ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
Advertisement
2019 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತ ಸೆಮಿ ಫೈನಲ್‍ಗೆ ಆರ್ಹತೆ ಪಡೆದಿರುವ ಟೀಂ ಇಂಡಿಯಾ ಎರಡು ಬದಲಾವಣೆಗಳೊಂದಿಗೆ ಆಡುತ್ತಿದ್ದು, ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Jasprit Bumrah strikes!
Nine dots in a row from him, and the pressure tells as #DimuthKarunaratne gets a toe-end through to MS Dhoni.
Sri Lanka are 17/1#CWC19 | #SLvIND pic.twitter.com/2mNseluhOO
— ICC Cricket World Cup (@cricketworldcup) July 6, 2019