ಬೆಂಗಳೂರು: ಸೂರು ಇಲ್ಲದವರಿಗೆ ಸೂರು ಕಲ್ಪಿಸೋ ಅನೇಕ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತರುತ್ತಾನೆ ಇರ್ತವೆ. ಈಗ ಬಿಜೆಪಿ ಸರ್ಕಾರ ಇಂತಹದ್ದೇ ಹೊಸ ಯೋಜನೆ ಸ್ಲಂ ನಿವಾಸಿಗಳಿಗೆ ತರುತ್ತಿದ್ದು, ಒಂದು ಲಕ್ಷ ರೂಪಾಯಿಗೆ ಮನೆ ಕೊಡುವ ಕೆಲಸಕ್ಕೆ ಕೈ ಹಾಕಿದೆ.
ವಿಧಾನಸೌಧದಲ್ಲಿ ಮಾತನಾಡಿದ ವಸತಿ ಸಚಿವ ಸೋಮಣ್ಣ, ಸರ್ಕಾರದ ಯೋಜನೆ ಬಗ್ಗೆ ತಿಳಿಸಿದರು. ಸ್ಲಂ ನಿವಾಸಿಗಳಿಗೆ ಕಡಿಮೆ ಬೆಲೆಗೆ ಮನೆ ಕೊಡಲಾಗುತ್ತದೆ. ಇನ್ನೆರಡು ವರ್ಷಗಳಲ್ಲಿ 50 ಸಾವಿರ ಮನೆಗಳನ್ನ ನಿರ್ಮಾಣ ಮಾಡುತ್ತೇವೆ. ಈ 50 ಸಾವಿರ ಮನೆಗಳನ್ನ ಸಂಪೂರ್ಣವಾಗಿ ಸ್ಲಂ ನಿವಾಸಿಗಳಿಗೆ ನೀಡುತ್ತೇವೆ ಅಂದರು. ಸದ್ಯ ಬೆಂಗಳೂರಿನಲ್ಲಿ 392 ಅಧಿಕೃತ ಸ್ಲಂಗಳಿವೆ. ನಿರ್ಮಾಣ ಮಾಡೋ ಹೊಸ ಮನೆಯನ್ನ ಸ್ಲಂ ನಿವಾಸಿಗಳಿಗೆ ಮಾತ್ರ ಕೊಡುವುದಾಗಿ ಅವರು ಸ್ಪಷ್ಟಪಡಿಸಿದರು.
Advertisement
Advertisement
ಸ್ಲಂ ನಿವಾಸಿಗಳಿಗಾಗಿ ಈ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಸ್ಲಂ ಮುಕ್ತ ನಗರ ಮಾಡೋದು ನಮ್ಮ ಕನಸ್ಸು. ಹೀಗಾಗಿ ಈ ಕೆಲಸಕ್ಕೆ ಕೈ ಹಾಕಿದ್ದೇವೆ ಅಂತ ಸಚಿವರು ತಿಳಿಸಿದರು. ಕಡಿಮೆ ಬೆಲೆ ಅಂದ್ರೆ 1 ಲಕ್ಷಕ್ಕೆ ಮನೆ ಕೊಡ್ತೀವಿ. ಆ ಒಂದು ಲಕ್ಷಕ್ಕೂ ಬ್ಯಾಂಕ್ ನಿಂದ ಲೋನ್ ಕೊಡಿಸಲಾಗುತ್ತದೆ. ಲೋನ್ ನೀಡಲು ಅನೇಕ ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಅಂತ ಸಚಿವರು ತಿಳಿಸಿದರು.
Advertisement