ಬೆಂಗಳೂರು: ಬಸ್ ಸೌಲಭ್ಯವಿಲ್ಲದೇ ಸಾಕಷ್ಟು ವರ್ಷ ಪರದಾಡಿದ ಗ್ರಾಮದಲ್ಲಿ ಇದೀಗ ಹೊಸ ಬಸ್ ಗೆ ಚಾಲನೆ ನೀಡೋ ಮೂಲಕ ಹೊಸ ವರ್ಷಕ್ಕೆ ಗಿಫ್ಟ್ ನೀಡಿದಂತಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರ್ಜುನಬೆಟ್ಟಹಳ್ಳಿ ಗ್ರಾಮದ ಜನ ಬಸ್ ಸೌಲಭ್ಯವಿಲ್ಲದೆ ಸಾಕಷ್ಟು ವರ್ಷಗಳಿಂದ ಪರದಾಡುವಂತ ಪರಿಸ್ಥಿತಿ ಎದುರಾಗಿತ್ತು. ಆದರೆ ಇಂದು ಕೆಎಸ್‍ಆರ್‍ಟಿಸಿ ವತಿಯಿಂದ ಗ್ರಾಮಕ್ಕೆ ಹೊಸ ವರ್ಷದ ಗಿಫ್ಟ್ ನೀಡಲಾಗಿದೆ.
Advertisement
Advertisement
ಸನಾತನ ಪರಿಪೂರ್ಣ ಆಶ್ರಮದ ಶ್ರೀನಿವಾಸ್ ಗುರೂಜಿ ನೂತನ ಕೆಎಸ್‍ಆರ್‍ಟಿಸಿ ಬಸ್‍ಗೆ ಚಾಲನೆ ನೀಡಿದರು. ಹೊಸ ವರ್ಷದಂದೇ ಗ್ರಾಮಕ್ಕೆ ಬಂದ ಬಸ್‍ಗೆ ಗ್ರಾಮಸ್ಥರು ತಳಿರು ತೋರಣಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿ ಸಂತಸದಿಂದ ಮೊದಲ ದಿನದಂದು ಬಸ್‍ನಲ್ಲಿ ಪ್ರಯಾಣಿಸಿದರು.
Advertisement
ಈ ಬಸ್ ನೆಲಮಂಗಲದ ಅರ್ಜುನಬೆಟ್ಟಹಳ್ಳಿಯಿಂದ ಬೆಂಗಳೂರಿನ ಕೆಆರ್ ಮಾರುಕಟ್ಟೆಗೆ ಸಂಚರಿಸಲಿದ್ದು ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.