ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಕೆಎಸ್‌ಆರ್‌ಟಿಸಿ (KSRTC) ಬಂಪರ್ ಆದಾಯಗಳಿಸಿದೆ.
ದೀಪಾವಳಿ ಹಬ್ಬದಿಂದ (Deepawali) ಸಾಲು ಸಾಲು ರಜೆಗಳಿದ್ದ ಕಾರಣ ಊರಿನತ್ತ ತೆರಳಿದ್ದವರು ನ.03 ರಂದು ಭಾನುವಾರ ಮತ್ತೆ ಸಿಲಿಕಾನ್ ಸಿಟಿಗೆ ಮರಳಿದ್ದಾರೆ. ಇದರಿಂದಾಗಿ ಭಾನುವಾರ ಒಂದೇ ದಿನ ಆನ್‌ಲೈನ್‌ಲ್ಲಿ 85,462 ಸೀಟುಗಳನ್ನು ಬುಕಿಂಗ್ ಆಗಿದ್ದವು.ಇದನ್ನೂ ಓದಿ: ಬಿಟ್ಟಿ ಸಲಹೆ ಕೊಟ್ಟ ನೆಟ್ಟಿಗನಿಗೆ ಸಮಂತಾ ತಿರುಗೇಟು
Advertisement
Advertisement
85,462 ಸೀಟುಗಳು ಬುಕ್ ಆಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 5.59 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿದೆ. ಇದಕ್ಕೂ ಮೊದಲು ಅಕ್ಟೋಬರ್ ಅಂತ್ಯದ ದಿನವೊಂದರಲ್ಲಿ 67,033 ಟಿಕೆಟ್ ಮಾರಾಟವಾಗಿದ್ದವು.
Advertisement
ಹಬ್ಬದ ನಿಮಿತ್ತ ಕೆಎಸ್‌ಆರ್‌ಟಿಸಿ ಜೊತೆಗೆ ಬಿಎಂಟಿಸಿಯು ಕಾರ್ಯನಿರ್ವಹಿಸಿದ್ದು, ಗಳಿಸಿರುವ ಆದಾಯಕ್ಕೆ ಸಾಥ್ ನೀಡಿದೆ.ಇದನ್ನೂ ಓದಿ: ದತ್ತಮಾಲಾ ಅಭಿಯಾನ – 2 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ