ಬಳ್ಳಾರಿ: ಹಾಡಹಗಲೇ ಎತ್ತುಗಳ (Bullock) ಮೇಲೆ ಚಿರತೆಯೊಂದು (Leopard) ದಾಳಿ ಮಾಡಿರುವ ಘಟನೆ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ (Hosapete) ತಾಲೂಕಿನ ಜಂಬುನಾಥನಹಳ್ಳಿ ಪ್ರದೇಶದಲ್ಲಿ ನಡೆದಿದೆ.
ರೈತ ಕಟಗಿ ಹೇಮಣ್ಣ ಎನ್ ಸೇರಿದ ಎತ್ತುಗಳ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿ ವೇಳೆ ಎತ್ತುಗಳಿಗೆ ಗಾಯಗಳಾಗಿದ್ದು, ಚಿರತೆ ದಾಳಿಯಿಂದ ಬಚಾವ್ ಆಗಿವೆ. ಚಿರತೆ ಎತ್ತುಗಳಿಗೆ ಪರಚಿ, ಗಾಯಗೊಳಿಸಿದೆ. ಇದನ್ನೂ ಓದಿ: ಅಕ್ರಮವಾಗಿ 30ಟನ್ ಅನ್ನಭಾಗ್ಯ ಅಕ್ಕಿ ಸಾಗಾಟ – ಮಾಲು ಸಮೇತ ಲಾರಿ ಸೀಜ್
ಚಿರತೆ ದಾಳಿಯಿಂದ ಸುತ್ತಲಿನ ರೈತರು ಬೆಚ್ಚಿದ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆಯೂ ದಾಳಿ ಮಾಡಿದ್ದ ನಾಯಿಯೊಂದನ್ನು ಹೊತ್ತುಕೊಂಡು ಹೋಗಿತ್ತು. ಆಗ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ನಿರ್ಲಕ್ಷ್ಯ ಮಾಡಿದ್ದರು.
ಅರಣ್ಯ ಇಲಾಖೆ ಬೋನು ಇಡದೇ ನಿರ್ಲಕ್ಷ ಮಾಡಿದೆ. ಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬೋನು ಅಳವಡಿಸಿ, ಚಿರತೆ ಸೆರೆಹಿಡಿಯಬೇಕು ಅಂತಾ ರೈತರ ಆಗ್ರಹಿಸಿದ್ದಾರೆ.

