ಬೆಂಗಳೂರು: ಬುಲೆಟ್ ಟ್ರೈನ್‍ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಷ್ಟೇ ಓಡಾಡಬಹುದು. ಅದು ಅತ್ಯಂತ ದುಬಾರಿ. ಅದು ಜನಸಾಮಾನ್ಯರನ್ನು ತಲುಪಲು ಸಾಧ್ಯವೇ ಇಲ್ಲ. ನಮಗೆ ಬೇಕಾಗಿರೋದು ಆಧುನಿಕ, ಸ್ವಚ್ಛ, ಸುರಕ್ಷಿತ ಮತ್ತು ವೇಗದ ರೈಲು ವ್ಯವಸ್ಥೆ ಎಂದು ಮೆಟ್ರೋಮ್ಯಾನ್ ಎಂದೇ ಖ್ಯಾತರಾಗಿರೋ ಇ. ಶ್ರೀಧರನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಶ್ರೀಧರನ್, ಪರೋಕ್ಷವಾಗಿಯೇ ಪ್ರಧಾನಿ ಮೋದಿಯ ಮಹತ್ವಕಾಂಕ್ಷೆಯ 1 ಲಕ್ಷ ಕೋಟಿ ರೂಪಾಯಿ ವೆಚ್ಚದ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
ಪ್ರಾಮಾಣೀಕರಣ ಹಾಗೂ ಸ್ಥಳೀಯೀಕರಣಕ್ಕಾಗಿ ಮೆಟ್ರೋ ಸೇವೆ ದೀರ್ಘ ಕಾಲ ಇರಲಿ. ಪ್ರಾಮಾಣೀಕರಣದಿಂದ ರೈಲುಗಳ ಸಾಮಥ್ರ್ಯ ಹೆಚ್ಚುತ್ತದೆ ಹಾಗೂ ವೆಚ್ಚ ಕಡಿಮೆಗೊಳಿಸುತ್ತದೆ. ನಾವು ಇದರಿಂದ ‘ಮೇಕ್ ಇನ್ ಇಂಡಿಯಾ’ ಪ್ರಾಜೆಕ್ಟ್ ನಲ್ಲಿ ಕೋಚ್ ಹಾಗೂ ಉಳಿದ ಭಾಗಗಳನ್ನು ತಯಾರಿಸಬಹುದು ಎಂದು ಹೇಳಿದ್ದಾರೆ.
Advertisement
Advertisement
ದೆಹಲಿ ಮೆಟ್ರೋ ದೇಶದಲ್ಲೇ ಒಂದು ಹೊಸ ಮೆಟ್ರೋ ಕ್ರಾಂತಿಯನ್ನು ಸೃಷ್ಟಿಸಿದೆ. ಈಗ 13 ಮೆಟ್ರೋ ರೈಲುಗಳನ್ನು ತಯಾರಿಸಲಾಗುತ್ತಿದೆ. 20 ವರ್ಷದಲ್ಲಿ ದೆಹಲಿ ಮೆಟ್ರೋ 260 ಕಿ.ಮೀವರೆಗೂ ತಲುಪುತ್ತಿದ್ದು, ವಿಶ್ವದಲ್ಲೇ ಅತ್ಯಂತ ವೇಗವಾಗಿ ತಲುಪುತ್ತಿದೆ. ನನಗೆ ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ ಬಗ್ಗೆ ಹಮ್ಮೆ ಇದೆ ಎಂದು ತಿಳಿಸಿದ್ದಾರೆ.
Advertisement
ಭಾರತೀಯ ರೈಲ್ವೇ ವ್ಯವಸ್ಥೆ 20 ವರ್ಷಗಳಷ್ಟು ಹಿಂದಿದೆ. ಬಯೋ ಟಾಯ್ಲೆಟ್ ಬಿಟ್ಟು ರೈಲ್ವೆಯಲ್ಲಿ ಏನೂ ಸುಧಾರಣೆ ಆಗಿಲ್ಲ. ರೈಲುಗಳ ವೇಗ ಅದರಲ್ಲೂ ಪ್ರತಿಷ್ಠಿತ ರೈಲುಗಳ ಸರಾಸರಿ ವೇಗ ಕಡಿಮೆಯಾಗಿದೆ. ರೈಲು ಅಪಘಾತಗಳಲ್ಲಿ ಪ್ರತಿವರ್ಷ 20 ಸಾವಿರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರೀಧರನ್, ದೇಶಾದ್ಯಂತ ಸ್ವದೇಶಿ ಮೆಟ್ರೋ ರೈಲು ವ್ಯವಸ್ಥೆ ಜಾರಿಗೆ ಮೋದಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.