ನವದೆಹಲಿ: ಬುಲೆಟ್ ರೈಲು ಅಲ್ಲ. ಇದು ಮೋದಿಯ ಎಲೆಕ್ಷನ್ ರೈಲು ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲು ಬುಲೆಟ್ ರೈಲು ಯೋಜನೆ ಆರಂಭಿಸಿದ್ದು ಕಾಂಗ್ರೆಸ್. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿಯೇ ಯೋಜನೆ ಸಿದ್ದಪಡಿಸಲಾಗಿತ್ತು. 2005 ರಿಂದ ಬುಲೆಟ್ ಟ್ರೈನ್ ಯೋಜನೆಗೆ ತಯಾರಿ ನಡೆದಿದೆ ಎಂದು ಹೇಳಿದರು.
Advertisement
ಮೂರು ವರ್ಷದಿಂದ ಸುಮ್ಮನಿದ್ದ ಮೋದಿ ಈಗ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಮುಂಬೈ-ಅಹಮದಾಬಾದ್ ಮಧ್ಯೆ 12 ನಿಲ್ದಾಣ ಬರಲಿವೆ. ಬುಲೆಟ್ ರೈಲಿಗೆ 12 ನಿಲ್ದಾಣಗಳು ಯಾಕೆ? ಅದರಲ್ಲೂ ಗುಜರಾತ್ ನಲ್ಲೇ ಅತ್ಯಧಿಕ ನಿಲ್ದಾಣಗಳು ಬರಲಿದೆ. ಹೀಗಾಗಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿಗಿಂತ ಕಡೆಯಾಗಿ ಬುಲೆಟ್ ರೈಲು ನಿಲ್ದಾಣ ತಲುಪಲಿದೆ ಎಂದು ವ್ಯಂಗ್ಯವಾಡಿದರು.
Advertisement
ಶೇ.1 ರ ಬಡ್ಡಿಯಲ್ಲಿ ಜಪಾನ್ ಆರ್ಥಿಕ ಸಹಾಯ ಮಾಡಿದೆ ಅಂತಾ ಮೋದಿ ಹೇಳುತ್ತಾರೆ. ಆದರೆ ಜಪಾನ್ ಹಣವನ್ನು ಪುಕ್ಕಟೆ ನೀಡುತ್ತಿಲ್ಲ. ಜಪಾನ್ ದೇಶದಲ್ಲೇ ಹಳಿ, ಬೋಗಿ ತಯಾರಾಗುತ್ತದೆ. ನಮ್ಮ ದೇಶದಲ್ಲಿ ಹಳಿ, ಬೋಗಿ ತಯಾರು ಮಾಡಲು ಕಾರ್ಖಾನೆಗಳಿಲ್ಲ. ಅದರ ಕಮಿಷನ್ ಯಾರಿಗೆ ಹೋಗುತ್ತೆ ಅಂತಾ ಗೊತ್ತಿದೆಯಾ? ಮೇಕ್ ಇನ್ ಇಂಡಿಯಾಗೆ ಅರ್ಥ ಎಲ್ಲಿದೆ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.