ಚಂಡೀಗಢ: ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಾರೆನ್ಸ್ ಬಿಷ್ಣೋಯ್‍ಗೆ ಪಂಜಾಬ್ ಪೊಲೀಸರು ಹೆಚ್ಚಿನ ಭದ್ರತೆ ನೀಡಿ ಕೋರ್ಟ್ ಬಳಿ ಕರೆತಂದರು.
ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್‍ನನ್ನು ಪಂಜಾಬ್ ಪೊಲೀಸರು ಬುಧವಾರ ಮುಂಜಾನೆ ಮಾನ್ಸಾ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಈ ವೇಳೆ ಪಂಜಾಬ್ ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ಮಾಡುವಂತೆ ಆದೇಶ ಹೊರಡಿಸಿದೆ.
Advertisement
ಭದ್ರತೆ ಹೇಗಿದೆ?
ಹೈ-ಪ್ರೊಫೈಲ್ ಪ್ರಕರಣದ ಪ್ರಮುಖ ಆರೋಪಿ ಮತ್ತು ಸಂಚುಕೋರ ಬಿಷ್ಣೋಯ್‍ನನ್ನು ಬಿಗಿ ಭದ್ರತೆಯ ನಡುವೆ ಮಾನ್ಸಾದಿಂದ ಮೊಹಾಲಿಗೆ ಸಾಗಿಸಲಾಗಿತ್ತು. ಈತನನ್ನು ಬುಲೆಟ್ ಪ್ರೂಫ್ ವಾಹನದಲ್ಲಿ ಸ್ಥಳಾಂತರಿಸಲಾಗಿದೆ. ಅಲ್ಲದೇ ಎರಡು ಡಜನ್ ವಾಹನಗಳನ್ನು ಒಳಗೊಂಡ ಸುಮಾರು 100 ಪೊಲೀಸರು ಅವನ ಬೆಂಗಾವಲಿನಲ್ಲಿದೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
Advertisement
Advertisement
ಮೊಹಾಲಿಯಲ್ಲಿ, ಪಂಜಾಬ್ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ), ದರೋಡೆಕೋರರ ವಿರುದ್ಧ ವಿಚಾರಣೆ ನಡೆಸುತ್ತಿದೆ. ಈ ವೇಳೆ ಬಿಷ್ಣೋಯ್, ಸಿಧು ಹತ್ಯೆಯಲ್ಲಿ ಯಾವ ರೀತಿ ಭಾಗಿಯಾಗಿದ್ದ ಎಂದು ತನಿಖೆ ಮಾಡುತ್ತಿದೆ.
Advertisement
ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಪಂಜಾಬ್‍ನ ಅಡ್ವೊಕೇಟ್ ಜನರಲ್ ಸ್ವತಃ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‍ಗೆ ಹಾಜರಾಗಿ ರಿಮಾಂಡ್‍ಗೆ ಒತ್ತಾಯಿಸಿದರು. ಸಿಧು ಮೂಸೆವಾಲಾ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿಯು ಬಿಷ್ಣೋಯ್‍ನನ್ನು ಬಂಧಿಸಲು ನ್ಯಾಯಾಲಯದ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದು, ಅವರ ವಿರುದ್ಧ ಸ್ಥಳೀಯ ಮಾನ್ಸಾ ನ್ಯಾಯಾಲಯ ಈಗಾಗಲೇ ಬಂಧನ ವಾರಂಟ್ ಹೊರಡಿಸಿದೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು