ಶ್ರೀನಗರ: ಪಾಕಿಸ್ತಾನದ ಗಡಿ ಭಾಗದ ಭಾರತೀಯ ರೈತರು ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಬಳಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.
ನೆರೆಯ ಪಾಕಿಸ್ತಾನ ಪದೇ ಪದೇ ಕದಲ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊಂಡಂತೆ ಜಮೀನಿಗೆ ತೆರಳಲು ರೈತರು ಭಯಪಡುವಂತಾಗಿತ್ತು. ಹಾಗಾಗಿ ಸಾಂಬಾ ಸೆಕ್ಟರ್ ವ್ಯಾಪ್ತಿಯಲ್ಲಿ ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಬಳಸಲಾಗುತ್ತಿದೆ.
Advertisement
Advertisement
ರೈತರು ಕೃಷಿ ಚಟುವಟಿಕೆ ನಡೆಸುವ ವೇಳೆ ಬಿಎಸ್‍ಎಫ್ ಯೋಧರು ಸಹ ರಕ್ಷಣೆ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಫೋಟೋಗಳು ಹರಿದಾಡುತ್ತಿವೆ. ರಕ್ಷಣೆ ನೀಡಿರುವ ಯೋಧರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.