Connect with us

Bengaluru City

ಯಾರಿಗೂ ಹೆದ್ರೋ ಅವಶ್ಯಕತೆಯಿಲ್ಲ, ಆದ್ರೆ ಆ ವ್ಯಕ್ತಿಯ ಹೆಸ್ರು ಹೇಳಲ್ಲ: ಬುಲೆಟ್ ಪ್ರಕಾಶ್

Published

on

ಬೆಂಗಳೂರು: ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ ಅಂತಾ ಬಾಂಬ್ ಸಿಡಿಸಿದ್ದ ನಟ ಬುಲೆಟ್ ಪ್ರಕಾಶ್ ಇದೀಗ ಆ ವ್ಯಕ್ತಿಯ ಹೆಸರು ಹೇಳಲ್ಲ ಎಂದಿದ್ದಾರೆ.

ಯಾರಿಗೂ ಹೆದರೋ ಅವಶ್ಯಕತೆಯಿಲ್ಲ. ಆದರೆ ಆ ವ್ಯಕ್ತಿಯ ಹೆಸರು ಹೇಳಲ್ಲ. ಮಂಗಳವಾರ ಸಂಜೆಯಿಂದ ಚಿತ್ರರಂಗದ ಹಿರಿಯರಿಂದ ಬಹಳಷ್ಟು ಫೋನ್‍ಗಳು ಬರ್ತಿವೆ. ಚಿತ್ರರಂಗದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಆ ವ್ಯಕ್ತಿಯ ಹೆಸರು ಮತ್ತು ಆ ವಿಚಾರವಾಗಿ ಯಾವುದನ್ನೂ ಹೇಳಲಾರೆ ಎಂದು ಬುಲೆಟ್ ಪ್ರಕಾಶ್ ಹೇಳಿದ್ದಾರೆ.

ನನಗೆ ಅಭಿಮಾನಿ ಬಳಗ ಜಾಸ್ತಿ ಇದೆ. ಹೀಗಾಗಿ ಆವಾಗವಾಗ ನನ್ನ ಬಗ್ಗೆ ಅಪಪ್ರಚಾರ ಮಾಡ್ತಾರೆ. ನನಗೆ ನೋವಾಗಿದೆ ಅದಕ್ಕೆ ಟ್ವೀಟ್ ಮಾಡಿದ್ದೆ. ನಿನ್ನೆ ರಾತ್ರಿಯಿಂದಲೂ ಹಲವು ಫೋನ್ ಕರೆಗಳು ಬರ್ತಿವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಎಲ್ಲವನ್ನೂ ಬಗೆಹರಿಸಿಕೊಳ್ಳೋಣ ಅಂತಾ ಹಿರಿಯರು ಹೇಳಿದ್ದಾರೆ. ಅದಕ್ಕೆ ವ್ಯಕ್ತಿಯ ಹೆಸರು ಹೇಳಲ್ಲ. ಹಿರಿಯರು ಏನೂ ಹೇಳಬೇಡ ಎಂದಿದ್ದಾರೆ. ಅದಕ್ಕೆ ಏನೂ ಹೇಳೋದಿಲ್ಲ. ನಾವೆಲ್ಲಾ ಒಂದೇ. ನಾವ್ ನಾವೇ ಸರಿ ಮಾಡಿಕೊಳ್ಳುತ್ತೇವೆ ಅಂತ ಬುಲೆಟ್ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.

https://www.youtube.com/watch?v=2UMKw7vfQJ4

ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ. ಸ್ಯಾಂಡಲ್‍ವುಡ್‍ನಲ್ಲಿ ಭಿನ್ನಮತ, ಗುಂಪುಗಾರಿಕೆಗೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ. ದೀಪ ಆರುವ ಮೊದಲು ಜೋರಾಗಿ ಉರಿಯುತ್ತದೆ ಅಂತಾ ಹಾಸ್ಯ ನಟ ಬುಲೆಟ್ ಪ್ರಕಾಶ್ ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಅವರು, ಡಾ.ರಾಜ್ ಕಟ್ಟಿದ್ದ ಕನ್ನಡ ಚಿತ್ರರಂಗ ಚೆನ್ನಾಗಿತ್ತು. ಆದರೆ ಆ ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ಸಂಪೂರ್ಣವಾಗಿ ತಿಳಿಸುತ್ತೇನೆ ಅಂದಿದ್ರು. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸುವುದಾಗಿ ಬುಲೆಟ್ ಪ್ರಕಾಶ್ ಹೇಳಿದ್ರು.

Click to comment

Leave a Reply

Your email address will not be published. Required fields are marked *