ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ಮತ್ತೆ ಬುಲ್ಡೋಜರ್ (Bulldozer) ಸದ್ದು ಮಾಡಿದ್ದು, ಕೊಲೆ ಆರೋಪಿಗಳಿಗೆ ಸೇರಿದ್ದ ಬೆಳೆದ ಬೆಳೆಗಳನ್ನು ನೆಲಸಮ ಮಾಡಲಾಗಿದೆ.
ಜಹರ್ ಸಿಂಗ್, ಉಮೈದ್ ಸಿಂಗ್, ಮಖನ್ ಸಿಂಗ್, ಅರ್ಜುನ್ ಸಿಂಗ್ 2 ವಾರಗಳ ಹಿಂದೆ ನಡೆದ ಕೊಲೆಯಲ್ಲಿ ಮುಖ್ಯ ಆರೋಪಿಗಳಾಗಿದ್ದರು. ಈ ಆರೋಪಿಗಳು (Accused) ದಾಮೋಹ್ ಜಿಲ್ಲೆಯಲ್ಲಿ ಇಬ್ಬರು ವೃದ್ಧರಾದ ಬದ್ರಿ ಶುಕ್ಲಾ (68) ಹಾಗೂ ಆತನ ಸಹೋದರ ರಾಮ್‍ಸೇವಕ್ ಶುಕ್ಲಾ (65) ಅವರನ್ನು ಭೂವಿವಾದಕ್ಕೆ ಸಂಬಂಧಿಸಿ ಗುಂಡಿಕ್ಕಿ ಕೊಲೆ ಮಾಡಿದ್ದರು.
2021ರಲ್ಲಿ ಬದ್ರಿ ಶುಕ್ಲಾ ಹಾಗೂ ರಾಮ್‍ಸೇವಕ್ 3 ಎಕರೆ ಜಮೀನನ್ನು (Land) ಖರೀದಿಸಿದ್ದರು. ಅಂದಿನಿಂದ ಜಹರ್ ಸಿಂಗ್, ಉಮೈದ್ ಸಿಂಗ್, ಮಖನ್ ಸಿಂಗ್, ಅರ್ಜುನ್ ಸಿಂಗ್‍ನೊಂದಿಗೆ ವಿವಾದ ನಡೆಯುತ್ತಿತ್ತು. ಫೆ. 28ರಂದು ಶುಕ್ಲಾರನ್ನು ಸಿಂಗ್‌ನ ಗುಂಪು ಮನೆಗೆ ಬಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ನಿಮ್ಮ ಪಾಡಿಗೆ ನೀವಿರಿ, ನಮ್ಮ ಪಾಡಿಗೆ ನಾವಿರ್ತೀವಿ: ದಳಪತಿ ವಿರುದ್ಧ ಗುಡುಗಿದ ಶಿವಲಿಂಗೇಗೌಡ
ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಬುಲ್ಡೋಜರ್ ಅನ್ನು ತಂದು ಸಿಂಗ್‌ಗೆ ಜಮೀನಿನಲ್ಲಿದ್ದ ಬೆಳೆಗಳನ್ನು ನೆಲಸಮ ಮಾಡಿದ್ದಾರೆ. ಜೊತೆಗೆ ಸಿಂಗ್ ಕುಟುಂಬಸ್ಥರು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅತ್ಯಾಚಾರಗೈದು ಬಾಲಕಿಯ ಕೊಲೆ- ಕಾಮುಕನಿಗೆ ಗಲ್ಲುಶಿಕ್ಷೆ