ಜೈಪುರ: ಉತ್ತರಪ್ರದೇಶದಿಂದ ಪ್ರಾರಂಭವಾದ ಬುಲ್ಡೋಜರ್ ಸದ್ದು ಇದೀಗ ದೇಶಾದ್ಯಂತ ಅಬ್ಬರಿಸುತ್ತಿದೆ. ಈಗ ಕಾಂಗ್ರೆಸ್ ಅಧಿಕಾರವಿರುವ ರಾಜಸ್ಥಾನದಲ್ಲಿ ಜುಲ್ಡೋಜರ್ ಒಂದು 300 ವರ್ಷ ಹಳೆಯ ದೇವಾಯಲವನ್ನು ಕೆಡವಿದ್ದು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದೆ.
Advertisement
ರಾಜಸ್ಥಾನದ ಅಲ್ವಾರ್ ಜಿಲ್ಲೆ ಸರಾಯ್ ಪ್ರದೇಶದಲ್ಲಿರುವ 300 ವರ್ಷಗಳಷ್ಟು ಹಳೆಯ ಶಿವ ದೇವಾಲಯವನ್ನು ಶುಕ್ರವಾರ ಬುಲ್ಡೋಜರ್ ನೆಲಸಮ ಮಾಡಿದೆ. ಪುರಾತನ ದೇವಾಲಯವನ್ನು ಕೆಡವಿ ಹಾಕಿರುವ ಕಾರಣ ಗ್ರಾಮಸ್ಥರು ಆಕ್ರೋಶಗೊಂಡು, ನಗರ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಉಪ ವಿಭಾಗೀಯ ಮ್ಯಾಜಿಸ್ಟೆçÃಟ್ ಹಾಗೂ ಪುರಸಭೆಯ ರಾಜಗಢ ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಜಹಾಂಗೀರ್‌ಪುರಿ ಗಲಭೆ ಪ್ರಕರಣಕ್ಕೆ ಟ್ವಿಸ್ಟ್ – ಇಡಿಗೆ ಪತ್ರ ಬರೆದ ದೆಹಲಿ ಪೊಲೀಸ್ ಆಯುಕ್ತ
Advertisement
Ancient 300 year old, revered Shiv temple demolished in the name of development in Alwar, Rajasthan.
But the Rajasthan govt owes no explanation to anyone because this was a “Secular” demolition!!#CommunalCongress pic.twitter.com/ps4na6EdtI
— Priti Gandhi – प्रीति गांधी (@MrsGandhi) April 22, 2022
Advertisement
ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೇವು ಹಗರಣ – ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು
Advertisement