ದಾವಣಗೆರೆ: ಬುಲ್ಡೋಜರ್ ತರೋಕೆ ಇದು ಉತ್ತರ ಪ್ರದೇಶ ಅಲ್ಲ. ಕರ್ನಾಟಕವನ್ನು ಯುಪಿಗೆ ಹೋಲಿಸಬೇಡಿ. ಅಲ್ಲಿ ಬೇರೆ, ಬೇರೆ ವಿಷಯಗಳಿದ್ದವು ಅದಕ್ಕೆ ಬುಲ್ಡೋಜರ್ ಮಾದರಿ ಮಾಡ್ತಿದೆ ಅಲ್ಲಿನ ಸರ್ಕಾರ, ಆದರೆ ಕರ್ನಾಟಕದಲ್ಲಿ ಪ್ರಜ್ಞಾವಂತರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಯಾಕಾದ್ರು ಬಂದಿದೆ ಎಂದು ಜನ ಕೊರಗುತ್ತಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅವರು ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನು ಖರೀದಿ ಮಾಡಿ ಅಧಿಕಾರ ನಡೆಸುತ್ತಿದ್ದಾರೆ. ಇದನ್ನು ಸದನದಲ್ಲೇ ಶಾಸಕ ಶ್ರೀನಿವಾಸಗೌಡ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲದಿಂದ ಬಿಜೆಪಿ ಸರ್ಕಾರ ಜನ್ಮ ತಾಳಿದೆ. ಹೀಗಾಗಿ ಔಷಧಿ, ಗೊಬ್ಬರ, ನೇಮಕಾತಿ ಎಲ್ಲದರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಕಾಮಗಾರಿಗಳಲ್ಲಿ ಶೇ.40 ಕಮಿಷನ್ ಪಡೆಯುತ್ತಿದ್ದಾರೆ. ಇವರು ಇವತ್ತು ಇರ್ತಾರೆ ನಾಳೆ ಹೋಗ್ತಾರೆ. ಆದರೆ, ಇದು ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದೆ. ಪ್ರಸ್ತುತವಾಗಿ ನಡೆಯುತ್ತಿರುವ ಧರ್ಮ ದಂಗಲ್‍ನಿಂದಾಗಿ ಬಿಜೆಪಿ ನಾಯಕರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!
Advertisement
Advertisement
ಮುಸ್ಲಿಂರಿಗೆ ಪ್ರಧಾನ ಮಂತ್ರಿ ಆಗುವ ಅರ್ಹತೆ ಇದೆ, ಏಕೆ ಮುಸ್ಲಿಂರು ರಾಷ್ರಪತಿಯಾಗಿಲ್ವಾ, ವಿಜ್ಞಾನಿಗಳಾಗಿಲ್ವಾ, ಯಾಕೆ ಅವರ ಮೇಲೆ ಸುಮ್ಮನೆ ಭೇದ ಭಾವ ಮಾಡುತ್ತೀರಿ? ಬಿಜೆಪಿ ಕಷ್ಟಕಾಲದಲ್ಲಿ ಬಡವರ ಹೊಟ್ಟೆ ಮೇಲೆ ಬರೆ ಹಾಕಿದೆ. ಎಲ್ಲಾದರೂ ಗಾಡಿ ನಿಂತರೆ ಪಂಚರ್ ಯಾರು ಹಾಕುತ್ತಾರೆ? ಸಂವಿಧಾನ ಕಿತ್ತು ಹಾಕಲು ನಿಮ್ಮಿಂದ ಆಗತ್ತಾ?, ದೇಶ ಶಾಂತಿಯ ತೋಟವೆಂದು ನಾವು ಬದುಕಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಜನ್ಮವೇ ಭ್ರಷ್ಟಾಚಾರದ್ದು: ಡಿಕೆಶಿ
Advertisement
ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಬಿಜೆಪಿಯವರೇ. ನಮ್ಮ ಭಾಗದಲ್ಲಿ ಕಬ್ಬಾಳಮ್ಮ ದೇವಸ್ಥಾನ ಇದೆ ಅಲ್ಲಿ ಸಾವಿರ ಮರಿ ಕಡಿಯುತ್ತಾರೆ. ಕಡಿದಿದ್ದ ಮರಿಗಳನ್ನು ಮುಸ್ಲಿಂರೇ ಕ್ಲಿನ್ ಮಾಡುತ್ತಾರೆ. ಕೋಲಾರ, ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರು ಯಾರು?, ಚಿತ್ರದುರ್ಗದಲ್ಲಿ ಕುರಿಗಳ ವ್ಯಾಪಾರ ಆಗುತ್ತಿಲ್ಲ ಎನ್ನುವ ವರದಿ ನೋಡಿದೆ, 8 ಸಾವಿರಕ್ಕೆ ಮಾರಾಟವಾಗುತ್ತಿದ್ದ ಕುರಿಗಳು 3-4 ಸಾವಿರಕ್ಕೆ ಮಾರುತ್ತಿದ್ದಾರೆ. ಈಗ ಬಿಜೆಪಿಯವರು ಕುರಿಗಳನ್ನು ತಗೊಂಡು ಹೋಗುತ್ತಾರಾ?. ಇದರ ಪರಿಣಾಮ ಸಂತೆ, ಜಾತ್ರೆಗಳ ಮೇಲೆ ಬಿದ್ದಿದೆ ಎಂದು ಕಿಡಿಕಾರಿದರು.