ಲಕ್ನೋ: ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಕಟ್ಟಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡುವುದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಖ್ಯಾತಿ ಪಡೆದಿದ್ದಾರೆ. ಅದೇ ರೀತಿ ಇದೀಗ ಅವರ ಬುಲ್ಡೋಜರ್ (Buldozer) ನ್ಯೂಯಾರ್ಕ್ ಸಿಟಿಯಲ್ಲೂ (New York City) ಸದ್ದು ಮಾಡಿದ್ದು, ಕಾನೂನು ಬಾಹಿರವಾಗಿ ನಿರ್ಮಿಸುತ್ತಿದ್ದ ಬಡಾವಣೆಯನ್ನು ನೆಲಸಮಗೊಳಿಸಿದೆ.
ಇದು ಅಮೆರಿಕಾದ ನ್ಯೂಯಾರ್ಕ್ ನಗರ ಅಲ್ಲ. ಉತ್ತರಪ್ರದೇಶದ ಹೊರವಲಯದಲ್ಲಿರುವ ಕಾಕೋರಿಯಾ ಮೌಡಾ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸುತ್ತಿದ್ದ `ನ್ಯೂಯಾರ್ಕ್ ಸಿಟಿ’ ಅನ್ನು ಲಕ್ನೋ ಅಭಿವೃದ್ಧಿ ಪ್ರಾಧಿಕಾರ (LDA) ಧ್ವಂಸಗೊಳಿಸಿದೆ. ಇದನ್ನೂ ಓದಿ: ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ ಟ್ರಬಲ್ ಶೂಟರ್ ಡಿಕೆಶಿ
Advertisement
Advertisement
ಈ ಕುರಿತು ಎಲ್‌ಡಿಎ ವಲಯ ಅಧಿಕಾರಿ ದೇವಾಂಶ್ ತ್ರಿವೇದಿ ಮಾತನಾಡಿ, ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಟೌನ್‌ಶಿಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಲ್‌ಡಿಎ ಡೆವಲಪರ್‌ಗಳಿಗೆ ಈ ಹಿಂದೆ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದರೂ ಮತ್ತೆ ನಿರ್ಮಾಣವನ್ನು ಪ್ರಾರಂಭಿಸಿದ್ದಾರೆ ಎಂದರು. ಇದನ್ನೂ ಓದಿ: ಆನೇಕಲ್‌ನಲ್ಲಿ ತಡರಾತ್ರಿ ಗುಪ್ತಚರ ಇಲಾಖೆಯಿಂದ ದಂಪತಿ ವಿಚಾರಣೆ
Advertisement
Advertisement
ಬಳಿಕ ಎಲ್‌ಡಿಎ ನ್ಯಾಯಾಲಯವು ಇದನ್ನು ಕೆಡವಲು ಆದೇಶ ಹೊರಡಿಸಿತು. ಆದ್ದರಿಂದ ಗುರುವಾರ ಸಹಾಯಕ ಎಂಜಿನಿಯರ್ ವೈಪಿ ಸಿಂಗ್ ನೇತೃತ್ವದ ಎಲ್‌ಡಿಎ ತಂಡ ಮತ್ತು ಪೊಲೀಸರ ಬೆಂಗಾವಲಿನೊಂದಿಗೆ ಬಡಾವಣೆಯನ್ನು ಧ್ವಂಸಗೊಳಿಸಲಾಯಿತು ಎಂದು ದೇವಾಂಶ್ ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ